ಆ.20 : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ 170ನೇ ಜನ್ಮ ದಿನಾಚರಣೆ | ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿಯವರಿಗೆ ಬೆಳ್ಳಿ ಕಿರೀಟ ಅರ್ಪಣೆ

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ವತಿಯಿಂದ ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 170ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆ.20 ಮಂಗಳವಾರ ನಡೆಯಲಿದೆ.

ಬೆಳ್ಳಿಕಿರೀಟ ಸಮರ್ಪಣೆ.:

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ಜನ್ಮ ದಿನಾಚರಣೆಯನ್ನು ಬಿಲ್ಲವ ಬಾಂಧವರು ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರು ಬೆಳ್ಳಿಕಿರೀಟದೊಂದಿಗೆ ಸಂಭ್ರಮಿಸಿದರೆ ಬಳಿಕ ಪುತ್ತೂರಿನ ಬಿಲ್ಲವ ಸಂಘದಲ್ಲಿ ಮಾತ್ರ. ಇದೀಗ ಆ.20 ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರಿಗೆ ಬೆಳ್ಳಿ ಕಿರೀಟವನ್ನು ತೊಡಿಸುವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.



































 
 

ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ|ಎ.ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿರವರು ಗುರು ಸಂದೇಶ ನೀಡಲಿದ್ದು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕಡೆಂಜಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಬೆಳುವಾಯಿ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್, ಕರ್ನಾಟಕ ಸರಕಾರದ ಡಾ.ಬಿ.ಸಿ ರಾಯ್ ರಾಜ್ಯಪ್ರಶಸ್ತಿ ಪುರಸ್ಕೃತ ಹಾಗೂ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ವಿಭಾಗ ಮುಖ್ಯಸ್ಥ ಮಾತ್ರಕೋಶ ತಜ್ಞ ಡಾ.ಸದಾನಂದ ಪೂಜಾರಿ, ಉದ್ಯಮಿ ಬೆಂಗಳೂರು ಅನನ್ಯ ಎಂಟರ್‌ಪ್ರೈಸಸ್‌ನ ನಟೇಶ್ ಪೂಜಾರಿ ಪುಳಿತ್ತಡಿರವರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 7.30 ರಿಂದ ರಿಂದ ಶ್ರೀ ಕ್ಷೇತ್ರ ಕುದ್ರೋಳಿಯ ಶಾಂತಿವರ್ಯರ ನೇತೃತ್ವದಲ್ಲಿ ಪ್ರಾರ್ಥನೆ, ಗಣಹೋಮ, ಪಂಚಾಮೃತಾಭಿಷೇಕ, ಗುರುಪೂಜೆ ಬಳಿಕ ಸುಳ್ಯವದವು ಆಲಂಕಾರು, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ತಾಲೂಕಿನ ೫೧ ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ವೇದಿಕೆ ಪುತ್ತೂರು, ಯುವವಾಹಿನಿ ಪುತ್ತೂರು ಘಟಕ, ಉಪ್ಪಿನಂಗಡಿ ಹಾಗೂ ಕಡಬ ಘಟಕಗಳು, ಪುತ್ತೂರು ಬಿಲ್ಲವ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.

2023-24ನೇ ವರ್ಷದ ಎಸೆಸ್ಸೆಲ್ಸಿಯಲ್ಲಿ ಶೇ.95 ಮತ್ತು ಮೇಲ್ಪಟ್ಟು ಅಂಕ ಗಳಿಸಿದವರಿಗೆ, ಪಿಯುಸಿ, ಐಟಿಐ, ಡಿಎಡ್ ಅಂತಿಮ ಪರೀಕ್ಷೆಯಲ್ಲಿ ಶೇ.90 ಮತ್ತು ಮೇಲ್ಪಟ್ಟು ಅಂಕ ಗಳಿಸಿದವರಿಗೆ, ಎಲ್ಲಾ ತರದ ಡಿಗ್ರಿ, ಡಿಪ್ಲೋಮಾ, ಬಿಬಿಎಂ, ಬಿಸಿಎ, ಬಿಎಡ್, ಎಲ್‌ಎಲ್‌ಬಿ ಇತ್ಯಾದಿ ಕೋರ್ಸಿನ ಅಂತಿಮ ಪರೀಕ್ಷೆಯಲ್ಲಿ ಶೇ.85 ಮತ್ತು ಮೇಲ್ಪಟ್ಟ ಅಂಕ ಗಳಿಸಿದವರಿಗೆ, ಎಲ್ಲಾ ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಎಂಸಿಎ, ಎಂಬಿಎ, ಎಂಎಸ್‌ಡಬ್ಲ್ಯೂ, ಎಂಎ, ಎಂಕಾಂ, ಎಂಟೆಕ್ ಕೋರ್ಸಿನ ಅಂತಿಮ ಪರೀಕ್ಷೆಯಲ್ಲಿ ಶೇ.೮೦ ಮತ್ತು ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಐಪಿಎಸ್, ಐಎಎಸ್, ಕೆಎಎಸ್, ಕೆಇಎಸ್, ಪಿಎಚ್‌ಡಿ, ಸಿಎ ಪದವಿ ಪಡೆದವರಿಗೆ, 2023-24ರ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಪ್ರಶಸ್ತಿ ಅಥವಾ ರಾಜ್ಯ ಪ್ರಶಸ್ತಿ ಪಡೆದವರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ, 2023-24ರಲ್ಲಿ ಜಿಲ್ಲಾಮಟ್ಟಕ್ಕಿಂತ ಮೇಲ್ಪಟ್ಟ ಕ್ರೀಡಾ ಕ್ಷೇತ್ರ, ಕಲಾ ಕ್ಷೇತ್ರ, ಸಾಹಿತ್ಯ, ವಿಜ್ಞಾನ ಕ್ಷೇತ್ರದಲ್ಲಿನ ಪ್ರತಿಭೆ ಹೊಂದಿದ ಸಮಾಜ ಬಾಂಧವರಿಗೆ

ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಬಿಲ್ಲದ ಗ್ರಾಮ ಸಮಿತಿಗಳು, ಬಿಲ್ಲವ ಮಹಿಳಾ ವೇದಿಕೆ ಪುತ್ತೂರು, ಬಿಲ್ಲವ ವಿದ್ಯಾರ್ಥಿ ಸಂಘ ಪುತ್ತೂರು, ಯುವವಾಹಿನಿ ಪುತ್ತೂರು, ಉಪ್ಪಿನಂಗಡಿ ಮತ್ತು ಕಡಬ ಘಟಕಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಹಕಾರವಿದೆ.ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 170ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಿಲ್ಲವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಬೇಕಾಗಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಡು, ಉಪಾಧ್ಯಕ್ಷೆ ವಿಮಲಾ ಸುರೇಶ್, ಕಾರ್ಯದರ್ಶಿ ಚಿದಾನಂದ ಸುವರ್ಣ, ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾ‌ರ್ ಕೋಲಾಡಿ, ಸದಸ್ಯರಾದ ಸಜ್ಜನ್ ಕುಮಾರ್ ಕನ್ನರ್ನೂಜಿ, ರಾಜೇಶ್ ಪೂಜಾರಿ ಆರ್ಲಪದವು, ಉಮೇಶ್ ಬಾಯಾರುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸನ್ಮಾನ..

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ‘ಸಹಕಾರ ರತ್ನ’ ಕೆ.ಸೀತಾರಾಮ ರೈ ಸವಣೂರು, ಆರೋಗ್ಯ ಕ್ಷೇತ್ರದಲ್ಲಿ ಹಿರಿಯ ವೈದ್ಯ, ನಿವೃತ್ತ ಪ್ರಸೂತಿ ತಜ್ಞರಾದ ಡಾ.ಸುಬ್ರಾಯ ಭಟ್, ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಕೃಷಿಕರ ಹಾಗೂ ಬಿಲ್ಲವ ಸಂಘದ ಹಿರಿಯ ಸದಸ್ಯ ಬಾಳಪ್ಪ ಪೂಜಾರಿ ಕೇಪುಳುರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಬಿಲ್ಲವ ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top