ಮಂಗಳೂರು : ವೀರ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಎದುರು 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು
ಧ್ವಜಾರೋಹಣವನ್ನು ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗಿಶ್ ಶೆಟ್ಟಿ ಆಗಮಿಸಿದ್ದರು. ಅಲ್ಲದೆ ಡಿ.ಬಿ. ಬಾಲಕೃಷ್ಣ, ಪೂರ್ಣಿಮಾ ಕೆ.ಎಂ, ಸುಂದರ್ ಗೌಡ, ಕೇಶವ ಗೌಡ, ಗರುದೇವ ಯು.ಬಿ, ಡಾ. ಸಚಿನ್ ನಡ್ಕ, ಕುಸುಮಾಧರ, ಸಾರಿಕಾ ಸುರೇಶ್, ನವೀನ್ ಚಿಲ್ಪಾರ್, ರಾಮಚಂದ್ರ ಕೆ, ವಾಸುದೇವ ವಕೀಲರು ಅತಿಥಿಗಳಾಗಿ ಪಾಲ್ಗೊಂಡಿದ್ದರು.