ಸ್ವಾತಂತ್ರ್ಯ ದಿನಾಚರಣೆ ಮನೆ ಮನೆಯ ಹಬ್ಬವಾಗಲಿ

78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮದಿಂದ ಸ್ವಾತಂತ್ರ್ಯ ಆಚರಿಸಲಾಗುತ್ತದೆ. ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಅಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನವಿದು. ನಮ್ಮ ಪ್ರೀತಿಯ ಮಾತೃಭೂಮಿಗಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ವೀರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದಿನವಾಗಿದೆ.

ಸ್ವಾತಂತ್ರ್ಯ ದಿನ ಕೇವಲ ಆಗಸ್ಟ್ 15ಕ್ಕೆ ಮಾತ್ರ ಸೀಮಿತವಾಗಿಲ್ಲ, ಸ್ವಾತಂತ್ರ್ಯ ದಿನಾಚರಣೆ ವರ್ಷಕ್ಕೊಮ್ಮೆ ಬಂದರೂ ನಾವು ನಮ್ಮ ಸಂವಿಧಾನದ ಕಾನೂನಿಗೆ ಒಳಪಟ್ಟು ಪ್ರತಿ ದಿನ ಸ್ವಾತಂತ್ರ್ಯ ಹೊಂದಿರುತ್ತೇವೆ. ಆಗಸ್ಟ್ 15 ಎಲ್ಲರಿಗೂ ಹಬ್ಬದ ದಿನವಾಗಿದೆ. ತ್ರಿವರ್ಣ ಧ್ವಜವನ್ನು ಆರಿಸಿ ರಾಷ್ಟ್ರ ಗೀತೆಯನ್ನು ಹಾಡಿ ರಾಷ್ಟ್ರ ನಾಯಕರಿಗೆ ಗೌರವ ಸಲ್ಲಿಸಿ ಅದ್ದೂರಿಯಿಂದ ಈ ಹಬ್ಬವನ್ನು ಆಚರಿಸುತ್ತೇವೆ. ಸ್ವಾತಂತ್ರ್ಯ ದಿನಾಚರಣೆ ದೇಶದ ಏಕತೆ ಎತ್ತಿ ತೋರಿಸುವ ದಿನವಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಉತ್ತಮ ರೀತಿಯ ಸಂತೋಷದ ಅವಕಾಶವೇ ಸ್ವಾತಂತ್ರ್ಯ ಎಂದು ಹೇಳಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ದೇಶ ಹೇಗೆ ಇತ್ತು? ಸ್ವಾತಂತ್ರ್ಯ ನಂತರ ಭಾರತ ಹೇಗೆ ಇದೆ. ನಮ್ಮ ಇತಿಹಾಸ ನೋಡಿದಾಗ ಗೊತ್ತಾಗುತ್ತದೆ. ಹಿಂದೆ ಬ್ರಿಟಿಷರ ಕೈಗೊಂಬೆ ಆಗಿದ್ದ ಭಾರತೀಯರು ಸ್ವಾತಂತ್ರ್ಯ ನಂತರ ತನ್ನದೇ ಸ್ವಂತ ಯೋಚನೆ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಸ್ವಾತಂತ್ರ್ಯ ದಿನಾಚರಣೆಗೆ ಸಿದ್ದ ಮಾದರಿಯ ಒಂದು ಸಂದೇಶ ಭಾಷಣ, ರಾಷ್ಟ್ರಧ್ವಜ, ಭೂಪಟ, ಮಹಾತ್ಮ ಗಾಂಧಿ ಚಿತ್ರ ಇರುವ ಚಿತ್ರ ಸಂದೇಶವನ್ನು ವಾಟ್ಸ್ಆ್ಯಪ್‌ನಲ್ಲಿ ತೇಲಿ ಬಿಡುತ್ತಾರೆ. ‘ಹ್ಯಾಪಿ ಇಂಡಿಪೆಂಡೆನ್ಸ್ ಡೇ ಎಂದು ಹೇಳಿ ತಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದು ಸಂಭ್ರಮಿಸುತ್ತಾರೆ. ಈ ಸಂದೇಶಗಳನ್ನು ಎಲ್ಲರಿಗೂ ಕಳುಹಿಸುತ್ತಾರೆ. ಈ ಮೂಲಕ ಸ್ವಾತಂತ್ರ್ಯವನ್ನು ಆಚರಿಸುವವರು ನಮ್ಮಲ್ಲಿ ಇದ್ದಾರೆ. ಕೇವಲ ಶೋಕಿಗಾಗಿ ಆಚರಿಸಿ ನಾವೇ ದೊಡ್ಡ ಸಾಧನೆ ಮಾಡಿದ್ದೇವು ಎಂದು ಹೇಳುವವರಲ್ಲಿ ನಮ್ಮ ಹೋರಾಟಗಾರರ ಶ್ರಮ ತ್ಯಾಗದ ಬಗ್ಗೆ ಹೇಳಬೇಕಾಗಿದೆ.































 
 

ನಮ್ಮ ಸಂವಿಧಾನ ಕಾನೂನುಗಳನ್ನು ನಮಗೆ ಸ್ವಾತಂತ್ರ್ಯ ನೀಡಿದರೂ ಕೆಲವು ಬಲಾಡ್ಯ ಶಕ್ತಿಗಳು ನಮ್ಮ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತವೆ. ಕೆಲವೊಂದು ಸಲ ಸ್ವಾತಂತ್ರ್ಯ ಹೆಚ್ಚಾಗಿ ದೇಶದಲ್ಲಿ ನಡೆಯಬಾರದ ಕೆಲಸ ನಡೆದು ಹೋಗುತ್ತದೆ. ವೀರರ ತ್ಯಾಗ ಬಲಿದಾನದ ಜೊತೆಗೆ ಇತಿಹಾಸವನ್ನು ಮರೆಯಬಾರದು, ವ್ಯಾಪಾರದ ನೆಪದಲ್ಲಿ ಯಾರಿಗೂ ಮತ್ತೆ ಆಡಳಿತ ನಡೆಸಲು ಅವಕಾಶ ನೀಡಬಾರದು ಮತ್ತು ಸ್ವಾತಂತ್ರ್ಯ ಹೋರಾಟದ ಭವ್ಯ ఇತಿಹಾಸವನ್ನು ಇಂದಿನ ಯುವ ಪೀಳಿಗೆ ಪರಿಚಯಿಸಬೇಕು ಎಂದು ಈ ಹಬ್ಬವು ನೆನಪಿಸುತ್ತದೆ. ಸ್ವಾತಂತ್ರ್ಯ ದಿನವನ್ನು ಆಚರಿಸಲು ಪ್ರತಿಯೊಬ್ಬರಿಗೂ ವಿಭಿನ್ನ ವಿಧಾನಗಳಿದ್ದರೂ ಅವರ ಉದ್ದೇಶ ಮಾತ್ರ ಆಗಿರುತ್ತದೆ. ದೇಶದ ಜನತೆ ಎಲ್ಲರೂ ಒಟ್ಟಾಗಿ ಒಂದು ದಿನವನ್ನು ಸಂಭ್ರಮದಿಂದ ಆಚರಿಸೋಣ.

ಜಯಶ್ರೀ.ಸಂಪ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top