ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನ ಸಭಾ ಅಧಿವೇಶನದಲ್ಲಿ ಪುತ್ತೂರಿನ ಜನತೆಗೆ ಶಾಕಿಂಗ್ ನ್ಯೂಸ್ ದೊರೆತಿದೆ. ಪುತ್ತೂರಿನ ಜನತೆಯ ಬಹುದಿನದ ಬೇಡಿಕೆಯಾದ, ನದ್ಯ ಅಭಿಯಾನದ ರೂಪ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಕನಸ್ಸಿಗೆ ದೊಡ್ಡ ಆಘಾತವಾಗಿದೆ.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸುಮಾರು 610ಕೊಟಿ ಅನಾವರ್ತಕ ವೆಚ್ಚ ಹಾಗೂ 60 ಕೋಟಿ ಅವರ್ತಕ ವೆಚ್ಚ ಅವಶ್ಯಕತೆ ಇದ್ದು. ಅನುದಾನದ ಲಭ್ಯತೆಯ ಆಧಾರದಲ್ಲಿ ಜಿಲ್ಲೆಯಲ್ಲಿ ಕಾಲೇಜು ಪ್ರಾರಂಭಿಸಲು ಪರಿಶೀಲಿಸಲಾಗುವುದು. ಪುತ್ತೂರು ತಾಲೂಕಿನಲ್ಲಿ ಸದ್ಯ ಕಾಲೇಜು ಸ್ಥಾಪನೆಯ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಇಲ್ಲ ಎಂದು ಶಾಕಿಂಗ್ ಉತ್ತರ ನೀಡಿದ್ದಾರೆ.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಇರುವುದಿಲ್ಲ ಎಂದು ಸರಕಾರ ಈ ಅಧಿವೇಶನದಲ್ಲಿ ಘಂಟಾಘೋಷವಾಗಿ ಸಾರಿದೆ. ಈ ಸುದ್ದಿ ಪುತ್ತೂರಿನ ಜನತೆಯನ್ನು ನಿರಾಶೆಗೆ ದೂಡಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಮುಗಿಲು ಮುಟ್ಟಿದೆ.
ಮುಂದಿನ ಬಜೆಟ್ ಅಧಿವೇಶನದಲ್ಲಿ ಮೆಡಿಕಲ್ ಕಾಲೇಜ್ ಗೆ ಸಿದ್ದರಾಮಯ್ಯ ಸರಕಾರ ಅನುದಾನ ಇಡಲಿದೆ ಎಂದು ಇತ್ತೀಚೆಗಷ್ಟೆ ಶಾಸಕ ಅಶೋಕ್ ರೈಯವರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೇ ಅವರ ವಿಶ್ವಾಸಕ್ಕೆ ಧಕ್ಕೆ ಉಂಟಾಗುವಂತಹ ಈ ಬಾರಿ ಅಧಿವೇಶನದಲ್ಲಿ ಅವರಿಗೆ ಸಿಕ್ಕಿದೆ. ಅಶೋಕ್ ರೈಯವರು ಜುಲೈನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರ ಪ್ರಸ್ತುತ ಯಾವ ಹಂತದಲ್ಲಿದೆ? ಎಂದು ಪ್ರಶ್ನಿಸಿದರು. ಅಲ್ಲದೆ ಕಾಲೇಜು ಸ್ಥಾವನೆಯ ಬಗ್ಗೆ ಜಿಲ್ಲಾಧಿಕಾರಿಗಳು 10 ಎಕ್ರೆ ಜಾಗ ಗುರುತಿಸಿದ್ದು, ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಿರುವ ವಿಚಾರವು ಪ್ರಶ್ನೆಯ ಅಂಗವಾಗಿ ಪ್ರಸ್ತಾಪಿಸಿದ್ದರು.
ಪ್ರಶ್ನೆಗೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್, ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸುಮಾರು 610ಕೋಟಿ ಅನಾವರ್ತಕ ವೆಚ್ಚ ಹಾಗೂ 60 ಕೋಟಿ ಅವರ್ತಕ ವೆಚ್ಚ ಅವಶ್ಯಕತೆ ಇದ್ದು, ಅನುದಾನದ ಲಭ್ಯತೆಯ ಆಧಾರದಲ್ಲಿ ಜಿಲ್ಲೆಯಲ್ಲಿ ಕಾಲೇಜು ಪ್ರಾರಂಭಿಸಲು ಪರಿಶೀಲಿಸಲಾಗುವುದು. ಪುತ್ತೂರು ತಾಲೂಕಿನಲ್ಲಿ ಸದ್ಯ ಕಾಲೇಜು ಸ್ಥಾಪನೆಯ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಇಲ್ಲ ಎಂದು ಶಾಕಿಂಗ್ ಉತ್ತರ ನೀಡಿದ್ದಾರೆ.
ಅಶೋಕ್ ರೈವರು ಅಧಿಕಾರ ಸ್ವೀಕರಿಸಿದ 2 ವಾರದ ಬಳಿಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ್ದು ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿ, “ಮೆಡಿಕಲ್ ಕಾಲೇಜು ಪ್ರಸ್ತಾವನೆ ಕಡತ ತಾಲೂಕು ಆಡಳಿತದಲ್ಲೆ ಧೂಳು ತಿನ್ನುತ್ತಾ ಬಿದ್ದುಕೊಂಡಿತ್ತು. ಹಿಂದಿನ ಶಾಸಕರು ಇದನ್ನು ಮೇಲಿನ ಹಂತಕ್ಕೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಮಾಡಿಲ್ಲ ಎಂದು ಆರೋಪಿಸಿದ್ದರು. ಅಲ್ಲದೇ, ತಾವು ಜಿಲ್ಲಾಧಿಕಾರಿಗಳ ಮೂಲಕ ಕಡತವನ್ನು ತಯಾರಿಸಿ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಒಂದು ವಾರದ ಅವಧಿಯಲ್ಲಿ ನೀಡುವ ಕೆಲಸವನ್ನು ಮಾಡಿರುವುದಾಗಿ ಹೇಳಿಕೊಂಡಿದ್ದರು.
ಇಷ್ಟಾದ ಬಳಿಕವು ಸರಕಾರ ಹಳೇ ರಾಗವನ್ನು ಹಾಡುತ್ತಿರುವುದು, ಸುಳ್ಯ, ಕಡಬ, ಪುತ್ತೂರು ಹಾಗೂ ಬೆಳ್ತಂಗಡಿ ಜನರ ನಿದ್ದೆಗೆಡಿಸಿದೆ. ಮೆಡಿಕಲ್ ಕಾಲೇಜ್ ಅನ್ನು ರಾಜಕೀಯ ಪಕ್ಷಗಳು ಹಾಗು ಜನಪ್ರತಿನಿಧಿಗಳು ಕೇವಲ ಪ್ರಚಾರದ ವಸ್ತುವನ್ನಾಗಿಸಿಕೊಂಡಿದ್ದಾರೆ ಹೊರತು ಯಾವುದೇ ಇಚ್ಚಾಶಕ್ತಿ ಹೊಂದಿಲ್ಲ ಎನ್ನುವ ಆಕ್ರೋಶದ ಮಾತುಗಳು ಸದ್ಯ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಅಲ್ಲದೇ ನದ್ಯ ಜಿಲ್ಲೆಯ ಸಾವಿರಾರು ಜನರು ವಾಟ್ಸಾಫ್ ಗ್ರೂಪುಗಳನ್ನು ರಚಿಸಿಕೊಂಡು. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜ್ ಬೇಕೇಂದು ಒತ್ತಾಯಿಸಿದ್ದಾರೆ. ಆ ಗ್ರೂಪುಗಳಲ್ಲೂ ಸರಕಾರದ ಉತ್ತರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ .