ಪುತ್ತೂರು : ಪುತ್ತೂರು ನೆಹರುನಗರದ ಲಾಡ್ಜ್ ನಲ್ಲಿ ಭಿನ್ನ ಧರ್ಮದ ದಂಪತಿಗಳು ಉಳಿದುಕೊಂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಭಿನ್ನಧರ್ಮದ ಜೋಡಿ ನೆಹರುನಗರದ ವಸತಿ ಗೃಹದಲ್ಲಿ ಉಳಿದುಕೊಂಡಿರುವ ಬಗ್ಗೆ ಪೊಲೀಸರಿಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ ಕೊಠಡಿ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದ ಜೋಡಿಯನ್ನು ವಿಚಾರಣೆ ನಡೆಸಿದಾಗ ಅವರು ಒಂದೇ ಧರ್ಮಕ್ಕೆ ಸೇರಿದ ಬೆಂಗಳೂರು ಮೂಲದ ದಂಪತಿಗಳೆಂದು ತಿಳಿದುಬಂದಿದೆ.
ಈ ಬಗ್ಗೆ ಲಾಡ್ಜ್ ನ ಮಾಲಕರು ಪ್ರತಿಕ್ರಿಯೆ ನೀಡಿದ್ದು, ‘ನಾವು 4 ವರ್ಷಗಳ ಹಿಂದೆಯೇ ಅಗ್ರಿಮೆಂಟ್ ಮೂಲಕ ಲಾಡ್ಜ್ ನಡೆಸಲು ಬೇರೊಂದು ಸಂಸ್ಥೆಗೆ ಕೊಟ್ಟಿರುತ್ತೇವೆ. ಘಟನೆಯ ಬಗ್ಗೆ ನಮಗೆ ಹೆಚ್ಚೇನು ತಿಳಿದಿಲ್ಲ’ ಎಂದು ತಿಳಿಸಿದ್ದಾರೆ.