ಪುತ್ತೂರು : ಬಿಜೆಪಿ ವಿಧಾನಸಭಾ ಕ್ಷೇತ್ರದವತಿಯಿಂದ ಬೃಹತ್ ‘ತಿರಂಗ’ ಜಾಥಾ ಮಂಗಳವಾರ ನಡೆಯಿತು.
ಬೆಳಿಗ್ಗೆ ಬಿಜೆಪಿ ಕಚೇರಿಯಿಂದ ಹೊರ ತಿಂರಗ ಜಾಥಾ ಮೊಳಹಳ್ಳಿ ಶಿವರಾಯ ವೃತ್ತದ ಬಳಿ ಬಂದು ಅಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಬಳಿಕ ಜಾಥಾ ಮುಖ್ಯ ರಸ್ತೆಯಿಂದ ತೆರಳಿ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆಗೆ ತೆರಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಆಡಳಿತ ಸೌಧದ ಬಳಿಯಿರುವ ಅಮರ್ ಜವಾನ್ ಸ್ಮಾರಕದ ಬಳಿ ತೆರಳಿ ಜಾಥಾ ಸಮಾಪನಗೊಂಡಿತು.
ಮಾಜಿ ಶಾಸಕ ಸಂಜೀವ ಮಠಂದೂರು ಮೊಳಹಳ್ಳಿ ಶಿವರಾಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ತಿರಂಗ ಜಾಥಾಕ್ಕೆ ಚಾಲನೆ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ತಿರಂಗ ಯಾತ್ರೆಗೆ ಕರೆ ನೀಡಿದ್ದರು. ಪ್ರತೀ ಮನೆ ಮನೆಗಳಲ್ಲಿ ತಿಂರಗ ಧ್ವಜ ಹಾರಾಡಬೇಕು ಎಂಬುದು ಅವರ ಆಶಯವಾಗಿತ್ತು. ಅದರಂತೆ ಪ್ರತಿ ವರ್ಷ ಆ.13 ರಂದು ತಿರಂಗ ಜಾಥಾ ಆಯೋಜಿಸಲಾಗುತ್ತಿತ್ತು. ಅದರಂತೆ ಇಂದು ನಾವು ರಾಷ್ಟ್ರಪಿತನಿಗೆ ಮಾಲಾರ್ಪಣೆ ಮಾಡುವ ಮೂಲಕ ರಾಷ್ಟ್ರೀಯ ಬದ್ಧತೆ ನೆಲೆಯಲ್ಲಿ ಜಾಥಾ ಯಶಸ್ವಿಯಾಗಿ ಹಮ್ಮಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ ರಾವ್ ಬಪ್ಪಳಿಗೆ, ಆರ್.ಸಿ.ನಾರಾಯಣ್, ಮುಖಂಡರಾದ ಪಿ.ಜಿ.ಜಗನ್ನಿವಾಸ ರಾವ್ , ಪುರುಷೋತ್ತಮ ಮುಂಗ್ಲಿಮನೆ, ಯುವರಾಜ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ, ಮುಕುಂದ ಬಜತ್ತೂರು, ವಿರೂಪಾಕ್ಷ ಭಟ್ ಮಚ್ಚಿಮಲೆ, ನಿತೇಶ್ ಕುಮಾರ್ ಶಾಂತಿವನ, ಸುರೇಶ್ ಅತ್ರಮಜಲು, ಮಹೇಶ್ ಕೇರಿ, ಪುನೀತ್ ಮಾಡತ್ತಾರು, ಅರುಣ್ ವಿಟ್ಲ, ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಯಶಸ್ವಿನಿ ಶಾಸ್ತ್ರಿ, ಜಯಶ್ರೀ ಎಲ್.ಶೆಟ್ಟಿ, ಉಷಾಚಂದ್ರ ಮುಳಿಯ, ಗೌರಿ ಬನ್ನೂರು, ವಿದ್ಯಾ ಆರ್. ಗೌರಿ, ವಿಜಯಲಕ್ಷ್ಮೀ, ದೀಕ್ಷಾ ಪೈ, ಮತ್ತಿತರರು ಉಪಸ್ಥಿತರಿದ್ದರು.