ಕಡಬದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಮಾನವ ಸರಪಳಿ

ಕಡಬ: ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ , ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನಜಾಗೃತಿಗೋಸ್ಕರ ಮಾನವ ಸರಪಳಿ ಸೋಮವಾರ ಸಂಜೆ ಕಡಬದಲ್ಲಿ ನಡೆಯಿತು.

ಆರಂಭದಲ್ಲಿ ಕಡಬ ಜಂಕ್ಷನ್‌ನಲ್ಲಿ ಸೇರಿದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಾಣ ಮಾಡಿಕೊಂಡು ಬಿತ್ತಿ ಪತ್ರಗಳನ್ನು ಪ್ರದರ್ಶಿಸುತ್ತಾ  ಮೆರವಣಿಗೆಯಲ್ಲಿ ಸಾಗಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸೇರಿ ಮಾನವ ಸರಪಳಿ ನಿಮಾಣ ಮಾಡಿ ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಬಾಂಗ್ಲಾದಲ್ಲಿನ ಹಿಂದೂಗಳ ಮೇಲಿನ ಅನಾಚಾರ,  ಅತ್ಯಾಚಾರ ವಿಚಾರ  ಅಂತರಾಷ್ಟಿಯ ಮಟ್ಟದಲ್ಲಿ  ಮುನ್ನಲೆಗೆ ಬರಬೇಕು ಹಾಗಾದಾಗ ಬಾಂಗ್ಲಾದ ಹಿಂದೂಗಳ ರಕ್ಷಣೆಗೆ ಕ್ರಮ ಆಗಬಹುದು, ಅಂತರಾಷ್ಟಿಯ ಮಟ್ಟದಲ್ಲಿ ನಡೆದಿರುವ  ಷಡ್ಯಂತರದ ಫಲವಾಗಿ ಬಾಂಗ್ಲಾ ದೇಶದಲ್ಲಿ ಗಲಾಟೆ ದೊಂಬಿ ರಾಜಕೀಯ ಅಸ್ಥಿರತೆ ಉಂಟಾಗಿದೆ, ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಐಎಸ್‌ಐಯೊಂದಿಗೆ ಬಾಂಗ್ಲಾದ ಬಿಎಮ್‌ಪಿ ಮುಖ್ಯಸ್ಥೆಯ ಮಗ ಅರಬ್ ದೇಶದದಲ್ಲಿ ನಿಗೂಢ ಸಭೆ ಮಾಡುತ್ತಾನೆ, ಬಳಿಕ ಅಲ್ಲಿ ವಿದ್ಯಾರ್ಥಿಗಳನ್ನು ಛೂ ಬಿಟ್ಟು  ಹೋರಾಟ ಮಾಡಿ ಶೇಖ್ ಹಸೀನ ಅವರನ್ನು ಪಟ್ಟದಿಂದ ಇಳಿಸುವ ಷಡ್ಯಂತರದ  ಕಾರ್ಯ ಯಶಸ್ವಿಯಾಗುತ್ತದೆ, ಭಾರತದ ಮೇಲೆ ನಿಯಂತ್ರಣ ಸಾಧಿಸಬೇಕು ಎನ್ನುವ ಭಾರತ ವಿರೋಧಿ ದೇಶಗಳ ಕುತಂತ್ರದ ಭಾಗವಾಗಿ ಬಾಂಗ್ಲಾದದಲ್ಲಿ ಹಿಂಸಾಚಾರ ನಡೆಸಲಾಗಿದೆ. ಶೇಖ್ ಹಸೀನ ಅವರ ಮೇಲಿನ ಅಕ್ರೋಶ ಹಿಂದೂ ಧರ್ಮಿಯರ ಮೇಲೆ ಪ್ರಯೋಗವಾಗಿದೆ, ಅಲ್ಲಿ ಅಲ್ಪ ಸಂಖ್ಯಾತ ಹಿಂದೂಗಳ ಮಾರಣ ಹೋಮವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೊಂದು  ಪಾಕಿಸ್ಥಾನವಾಗಿ ಬಾಂಗ್ಲಾ ಭಾರತವನ್ನು ಕಾಡಲಿದೆ, ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು. 































 
 

ಈ ಸಂದರ್ಭದಲ್ಲಿ  ಮುಖಂಡರಾದ ವಾಸುದೇವ ಭಟ್ ಕಡ್ಯ,  ರವಿರಾಜ್ ಶೆಟ್ಟಿ ಕಡಬ,  ಕೃಷ್ಣ ಶೆಟ್ಟಿ ಕಡಬ, ಅಶ್ವಿತ್ ಕಂಡಿಗ, ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ರೈ ನಂದುಗುರಿ, ವೆಂಕಟ್ರಮಣ ರಾವ್ ಮಂಕುಡೆ,  ಶ್ರೀ ಕೃಷ್ಣ ಎಂ.ಆರ್.,  ಪ್ರಕಾಶ್ ಎನ್.ಕೆ, ಪ್ರಶಾಂತ್ ಪಂಜೋಡಿ, ವೀಣಾ ರಮೇಶ್ ಕೊಲ್ಲೆಸಾಗು, ಪುಲಸ್ತ್ಯ ರೈ, ಲಕ್ಷ್ಮೀಮನಾರಾಯಣ ರಾವ್ ಆತೂರು, ಪ್ರಶಾಂತ್ ಆರ್.ಕೆ,. ಮೇದಪ್ಪ ಡೆಪ್ಪುಣಿ, ಸುರೇಶ್ ದೇಂತಾರು, ಪ್ರದೀಪ್ ರೈ  ಮನವಳಿಕೆ ಮತ್ತಿತರರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top