ಪುತ್ತೂರು ಗೇರು ಸಂಶೋಧನಾ ಕೇಂದ್ರದಲ್ಲಿ ರೈತ ವಿಜ್ಞಾನಿ ಸಂವಾದ ಕಾರ್ಯಕ್ರಮ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರು ೧೦೯ ಹೊಸ ಕೃಷಿ ಮತ್ತು ತೋಟಗಾರಿಕೆ ತಳಿಗಳನ್ನು ಇಂದು ನವದೆಹಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ತುನಲ್ಲಿ ಬಿಡುಗಡೆ ಮಾಡಿದ್ದು, ಈ ನಿಟ್ಟಿನಲ್ಲಿ ಪುತ್ತೂರು ಗೇರು ನಿರ್ದೇಶನಾಲಯದಲ್ಲಿ ವಿಜ್ಞಾನಿ ರೈತ ಸಂವಾದವನ್ನು ಭಾನುವಾರ ಏರ್ಪಡಿಸಲಾಗಿತ್ತು.

ನವದೆಹಲಿಯಲ್ಲಿ ಎರಡು ಗೇರಿನ ಹೈಬ್ರಿಡ್ ಪ್ರಭೇದಗಳು- ನೇತ್ರ ಜಂಬೋ-೧ ಮತ್ತು ನೇತ್ರ ಗಂಗಾವನ್ನು ಐಸಿಎಆರ್- ಗೇರು ಸಂಶೋಧನಾ ನಿರ್ದೇಶನಾಲಯ ಅಭಿವೃದ್ಧಿಪಡಿಸಿದೆ.

ಸಂಶೋಧನಾ ಕೇಂದ್ರದ ನಿರ್ದೇಶಕ ಡಾ ಜೆ.ದಿನಕರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ ಅವರು ತಳಿ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳನ್ನು ಅಭಿನಂದಿಸಿದರು.



































 
 

ಇದರ ನಂತರ ಹೊಸದಾಗಿ ಬಿಡುಗಡೆಯಾದ ತಳಿಗಳ ಕುರಿತು ಸಂಕ್ಷಿಪ್ತ ಪ್ರಸ್ತುತಿಯನ್ನು ನೀಡಲಾಯಿತು. ನೇತ್ರ ಜಂಬೋ-೧ ತಳಿಯ ಮಾಹಿತಿಯನ್ನು   ಡಾ. ಜೆ. ದಿನಕರ ಅಡಿಗ, ನೇತ್ರ ಗಂಗಾ ಕುರಿತು ಪ್ರಧಾನ ವಿಜ್ಞಾನಿ ಡಾ. ಮೋಹನ, ಜಿ ಎಸ್, ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ  ಹಾಜರಿದ್ದ ನಿರ್ದೇಶನಾಲಯದ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಎನ್.ಯದುಕುಮಾರ್ ಅನುಭವ ಹಂಚಿಕೊಂಡರು. ಹೊಸದಾಗಿ ಬಿಡುಗಡೆಯಾದ ನೇತ್ರ ತಳಿಗಳ ಸಸಿ  ಉತ್ಪಾದನೆ ಮತ್ತು ಮಾರಾಟ ಮತ್ತು ಬೇಡಿಕೆಯ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದರು. ಶ್ರೀ ಕಡಮಜಲು ಸುಭಾಷ್ ರೈ, ಪ್ರಗತಿಪರ ರೈತರು ತಮ್ಮ ಗೇರು ಕೃಷಿಯ ಅನುಭವ ಮತ್ತು ಬೆಳೆ ಬೆಳೆಯುವ ಬಗ್ಗೆ ಅನುಭವ ಹಂಚಿಕೊಂಡರು.

ಒಟ್ಟು ೩೭ ವಿಜ್ಞಾನಿಗಳು ಸೇರಿದಂತೆ ೨೪ ರೈತರು   ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top