ಪುತ್ತೂರು : ಶ್ರೀ ದೇವತಾ ಸಮಿತಿ ವತಿಯಿಂದ ಪುತ್ತೂರು ಕಿಲ್ಲೇ ಮೈದಾನದಲ್ಲಿ ನಡೆಯುವ 67ನೇ ವರ್ಷದ ಮಹಾಗಣೇಶೋತ್ಸವದ ವಿಗ್ರಹ ರಚನೆಗೆ ಚಾಲನೆ, ಆಮಂತ್ರಣ ಪತ್ರಿಕೆ ಬಿಡುಗಡೆ ಶನಿವಾರ ನಡೆಯಿತು.
ವುತ್ತೂರು ಕೋರ್ಟ್ ರಸ್ತೆಯಲ್ಲಿರುವ ಹೈ ಕಾಂಪ್ಲೆಕ್ಸ್ನ ಸಭಾಂಗಣದಲ್ಲಿ ವೇದಮೂರ್ತಿ ನುಬ್ರಹ್ಮಣ್ಯ ಹೊಳ್ಳರ ನೇತೃತ್ವದಲ್ಲಿ, ದೇವತಾ ನಮಿತಿಯ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅವರ ಅಧ್ಯಕ್ಷತೆಯಲ್ಲಿ ವಿಗ್ರಹ ರಚನೆಗೆ ಮುಹೂರ್ತ ನಡೆಸಲಾಯಿತು.
ಶಿಲ್ಪಿ ರಮೇಶ್ ಪೂಜಾರಿಯವರು ಶ್ರೀಗಣೇಶ ವಿಗ್ರಹ ರಚಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಪ್ರತಿವರ್ಷ ನಾಗರ ಪಂಚಮಿಯ ದಿನದಂದೇ ಕಿಲ್ಲೆ ಮೈದಾನದ ಗಣೇಶೋತ್ಸವಕ್ಕೆ ವಿಗ್ರಹ ರಚನೆ ಮುಹೂರ್ತ ಮಾಡಲಾಗುತ್ತಿದೆ.
ಶ್ರೀ ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಕಳೆದ 66 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಇದೀಗ 67ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಗಣೇಶನ ಅನುಗ್ರಹದಿಂದ ಯಶಸ್ವಿಯಾಗಿ ನೆರವೇರಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವತಾ ಸಮಿತಿಯ ಪದಾಧಿಕಾರಿಗಳಾದ ಬಿ. ಕಿಟ್ಟಣ್ಣ ಗೌಡ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಗಣಪತಿ ಪೈ, ಸೀತಾರಾಮ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ದಿನೇಶ್ ಕುಲಾಲ್ ಪಿವಿ, ಗಣೇಶ್, ಗೀತಾ ಶೆಟ್ಟಿ ನೆಲ್ಲಿಕಟ್ಟೆ ಅಭಿಷೇಕ್ ಶೆಟ್ಟಿ ನೆಲ್ಲಿಕಟ್ಟೆ, ರತ್ನಾಕರ ಆಚಾರ್ಯ, ವನಂತ ನಾಯಕ್, ನುರೇಂದ್ರ ನೆಹರು ನಗರ, ಪೂರ್ಣೇಶ್ ಭಂಡಾರಿ, ಬಾಲಕೃಷ್ಣ ಪೈ, ಜನಾರ್ದನ ರಾವ್ ನೆಲ್ಲಿಕಟ್ಟೆ, ದಿನಕರ ಶೆಟ್ಟಿ ನೆಲ್ಲಿಕಟ್ಟೆ, ಚಂದ್ರಶೇಖರ, ನೂತ್ರಬೆಟ್ಟು ಜಗನ್ನಾಥ ರೈ, ರಾಮಚಂದ್ರ ನಾಯ್ಕ, ಶಿವರಾಮ ರೈ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.