ಪುತ್ತೂರು: ಶ್ರಾವಣ ಮಾಸ ಶುಕ್ಲ ಪಕ್ಷ ಪಂಚಮಿಯಂದು ನಡೆಯುವ ಪ್ರಥಮ ಹಬ್ಬ ನಾಗರಪಂಚಮಿಯನ್ನು ತಾಲೂಕಿನ ವಿವಿಧ ನಾಗಸನ್ನಿಧಿಗಳಲ್ಲಿ ಸಂಭ್ರಮ ಸಡಗರದಿಂದ ಇಂದು ಮುಂಜಾನೆಯಿಂದ ಆಚರಿಸಲಾಯಿತು.

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಆಚರಿಸಲಾಯಿತು.
ಮುಂಜಾನೆಯಿಂದಲೇ ನೂರಾರು ಭಕ್ತಾದಿಗಳು ಶ್ರೀ ನಾಗಸನ್ನಿಧಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಹಾಲು, ಸೀಯಾಳಾ, ಹಣ್ಣುಕಾಯಿ ಅರ್ಪಿಸಿದರು. ದೇವಸ್ಥಾನದ ಅರ್ಚಕರು ಶ್ರೀ ನಾಗನಿಗೆ ಅಭಿಷೇಕ ಮಾಡಿದರು.