ಪಂಜ : ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಸಂಭ್ರಮ ಸಡಗರದಿಂದ ಇಂದು ಮುಂಜಾನೆ ಆಚರಿಸಲಾಯಿತು.

ದೇಗುಲದ ಸಮೀಪದ ನಾಗನ ಕಟ್ಟೆಯಲ್ಲಿ ಪೂರ್ವಾಹ್ನ ನಾಗರ ಪಂಚಮಿ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಗರಡಿ ಬೈಲ್ ಮೂಲ ನಾಗನಕಟ್ಟೆಯಲ್ಲಿ ಪೂರ್ವಾಹ್ನ ಗಂಟೆ 11.30 ಕ್ಕೆ ಪೂಜೆ ನಡೆಯಲಿದೆ.

ಆ ಪ್ರಯುಕ್ತ ಹಣ್ಣುಕಾಯಿ, ಪಂಚಾಮೃತ ಅಭಿಷೇಕ,ನಾಗ ತಂಬಿಲ ಸೇವೆಗಳು ನಡೆಯಿತು . ಅರ್ಚಕ ರಾಮಚಂದ್ರ ಭಟ್ ವೈಧಿಕ ಕಾರ್ಯಕ್ರಮ ನೆರವೇರಿಸಿ ಪ್ರಾರ್ಥಿಸಿದರು.