ಪುತ್ತೂರು: ‘ನ್ಯೂಸ್ ಪುತ್ತೂರು’ ಹೊರತಂದ ‘ಶಿವಾಮೃತ’ ಸಂಚಿಕೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಅವರಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.
ಯೋಜನೆಯ ನಿರ್ದೇಶಕರ ಕಚೇರಿಗೆ ತೆರಳಿ “ಶಿವಾಮೃತ’ ಸಂಚಿಕೆ ಹಸ್ತಾಂತರಿಸಲಾಯಿತು.
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ನ್ಯೂಸ್ ಪುತ್ತೂರು ಹಾಗೂ ಪ್ರೇರಣಾ ಸಂಸ್ಥೆಯ ನಿರ್ದೇಶಕರಾದ ವಸಂತ ಎಸ್. ವೀರಮಂಗಲ, ನಾಗೇಶ್ ಕೆಡೆಂಜಿ, ಮುರಳೀಧರ ಕೆ.ಎಲ್, ಪ್ರೇರಣಾ ಸಂಸ್ಥೆಯ ನಿರ್ದೇಶಕಿ ಮೋಕ್ಷಿತಾ, ಪ್ರೇರಣಾ ಸಂಸ್ಥೆಯ ಮೆನೇಜರ್ ದಯಾಮಣಿ, ಯೋಜನೆಯ ಯೋಜನಾಧಿಕಾರಿ ಮುಖೇಶ್, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.