ಪುತ್ತೂರು: ಕಾಂಕ್ರೀಟ್ ಮಿಕ್ಸ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಲಾರಿಯೊಂದಕ್ಕೆ ಸೈಡ್ ಕೊಡುವ ಭರದಲ್ಲಿ ಉರುಳಿ ಬಿದ್ದ ಘಟನೆ ಬೆಟ್ಟಂಪಾಡಿ ಗ್ರಾಮದ ಕೊರಿಂಗಿಲದಲ್ಲಿ ಇಂದು ನಡೆದಿದೆ.

ಆರ್ಲಪದವಿನ ಕಾಮಗಾರಿ ಒಂದಕ್ಕೆ ಕಾಂಕ್ರೀಟ್ ಮಿಕ್ಸ್ ಹೇರಿಕೊಂಡು ಹಂಟ್ಯಾರು – ಪಾಣಾಜೆ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಕೊರಿಂಗಿಲ ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಬಂದ ಲಾರಿಗೆ ಸೈಡ್ ಕೊಡುವ ಭರದಲ್ಲಿ ಈ ದುರಂತ ಸಂಭವಿಸಿದ್ದು ಸುಮಾರು 30 ಅಡಿ ಆಳದ ತೋಟಕ್ಕೆ ಬಿದ್ದಿದೆ. ಅದರ ಚಾಲಕ ಅದೃಷ್ಟವಶಾತ್ ಪಾರಗಿದ್ದಾನೆ.
ಅಗಲ ಕಿರಿದಾದ ರಸ್ತೆ ಹಾಗೂ ಅಪಘಾತ ವಲಯವಾಗಿರುವುದರಿಂದ ಈ ದುರಂತ ಸಂಭವಿಸಿದೆ. ಲೋಕೋಪಯೋಗಿ ಇಂಜಿನಿಯರಿಂಗ್ ಇಲಾಖೆಗೆ ಈ ರಸ್ತೆಯ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.