ಒಲಿಂಪಿಕ್ಸ್  ನಿಂದ ಕುಸ್ತಿಪಟು ವಿನೇಶ್‍ ಫೋಗಟ್ ಅನರ್ಹ | ಆಸ್ಪತ್ರೆಗೆ ದಾಖಲು

ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಫೈನಲ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್ ಫೋಗಟ್ ತೂಕ ಇಳಿಸಲು ನಡೆಸಿದ ಅತಿಯಾದ ಪ್ರಯತ್ನದಿಂದಾಗಿ ಮೂರ್ಛೆ ಹೋದ ಪರಿಣಾಮ ಪ್ಯಾರಿಸ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. 

ವಿನೇಶ್ ಅವರು ಒಲಿಂಪಿಕ್ ವಿಲೇಜ್‌ನ ಪಾಲಿಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಫೈನಲ್‌ನ ದಿನದ ತೂಕದಲ್ಲಿ 150 ಗ್ರಾಂ ಅಧಿಕ ತೂಕ ಹೊಂದಿದ್ದರಿಂದ ಎರಡನೇ ದಿನ ಸ್ಪರ್ಧಿಸಲು ಫೋಗಟ್‌ ಅವರನ್ನು ಅನರ್ಹಗೊಳಿಸಲಾಗಿದೆ. 50 ಕೆಜಿ ವಿಭಾಗದಲ್ಲಿ ಅರ್ಹಗೊಳಿಸುವ ಸಲುವಾಗಿ ಫೋಗಟ್‌ ಸತತ ಪ್ರಯತ್ನ ಮಾಡಿದ್ದು ಆದರೆ ಸುಮಾರು 150 ಗ್ರಾಂ ಅಧಿಕವಾಗಿದ್ದರಿಂದ ಫೋಗಟ್‌ ಅವರನ್ನು ಅನರ್ಹಗೊಳಿಸಲಾಗಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top