ಪುತ್ತೂರು: ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆ ಸಹಯೋಗದಲ್ಲಿ ಆ. 5ರಂದು ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ 14 ಮತ್ತು 17ರ ವಯೋಮಾನದ ಕರಾಟೆ ಪಂದ್ಯಾಟದಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ 9ನೇ ತರಗತಿಯ ಸ್ವರೂಪ್ ಕೃಷ್ಣ ಪ್ರಥಮ ಸ್ಥಾನ ಹಾಗೂ 9ನೇ ತರಗತಿಯ ರಿಶೋನ್ ಲಸ್ರಾದೋ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಸ್ವರೂಪ್ ಕೃಷ್ಣ ಕೃಷ್ಣ ಗೌಡ ಕೆ ರಾಧಿಕಾ ಇಲೆಕ್ಟ್ರಿಕಲ್ಸ್ ಪುತ್ತೂರು ಮತ್ತು ಸೌಮ್ಯ ದಂಪತಿ ಪುತ್ರನಾಗಿದ್ದು, ಶಿವಪ್ರಸಾದ್ ರವರ ಶಿಷ್ಯರಾಗಿರುತ್ತಾರೆ.
ರಿಶೋನ್ ಲಸ್ರಾದೋ ರೋಶನ್ ಲಾಸ್ತಾದೋ ಮತ್ತು ಸುಶಾಂತಿ ದಂಪತಿ ಪುತ್ರನಾಗಿದ್ದು ಸೆನ್ಸಾಯಿ ಮಾಧವ ಅಳಿಕೆ ಮತ್ತು ರೋಹಿತ್ ಎಸ್.ಎನ್. ರವರ ಶಿಷ್ಯರಾಗಿದ್ದಾರೆ. ಶಾಲೆಯ ದೈಹಿಕ ಶಿಕ್ಷಕ ಹರೀಶ್ ಹಾಗೂ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆಗ್ನೆಸ್ ಬಿ.ಎಸ್ ರವರು ಮಾರ್ಗದರ್ಶನ ನೀಡಿರುತ್ತಾರೆ.