ಸೇವಾರತ್ನ ಪ್ರಶಸ್ತಿಗೆ ಭಾಜನರಾದ ಎ.ವಿ. ನಾರಾಯಣ್ ರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಅಭಿನಂದನೆ

ಪುತ್ತೂರು: ಮಂಗಳೂರು ಮ್ಯಾಕ್ಸ್ ಲೈಫ್  ಇನ್ಸೂರೆನ್ಸ್ ಕಂಪನಿಯ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕಾದ್ಯಕ್ಷ ಎ ವಿ ನಾರಾಯಣರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ವತಿಯಿಂದ ಶಾಲು, ಹಾರ ಹಾಕಿ ಹೂಗುಚ್ಛ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು,

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿ. ವಿ. ಮನೋಹರ್, ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ.ಎಂ., ಸಲಹಾ ಸಮಿತಿ ಸದಸ್ಯ ಜಿನ್ನಪ್ಪ ಗೌಡ ಮಲುವೇಳು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್  ಅಭಿನಂದನಾ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ  ಟ್ರಸ್ಟ್ ನ ಸಾಲ ಉಸ್ತುವಾರಿ ಶ್ರೀಧರ ಗೌಡ ಕಣಜಾಲು, ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ದೇವಳಿಕೆ, ವಿವಾಹ ವೇದಿಕೆ ಸಂಚಾಲಕ ಸುರೇಶ್ ಗೌಡ ಕಲ್ಲಾರೆ, ಟ್ರಸ್ಟ್ ನ ಮೆನೇಜರ್ ಸುನೀಲ್ ,ಮೇಲ್ವಿಚಾರಕರು, ಪ್ರೇರಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top