ಪುತ್ತೂರು: ಬೆಂಗಳೂರಿಗೆ ಅಕ್ರಮವಾಗಿ ಕಳಪೆ ಗುಣಮಟ್ಟದ ಮಾಂಸ ಸರಬರಾಜು ಮಾಡುವವರ ಮೇಲೆ ಕಾನೂನು ಕ್ರಮ ಸಹಿತ ಪುನಿತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಎಸಿಪಿ ಚಂದನ್ ಕುಮಾರ್ ಮೇಲೆ ಕಾನೂನು ಕ್ರಮ ಜರಗಿಸುವಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದೆ.
ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಹೊರರಾಜ್ಯಗಳಿಂದ ಸಿಟಿ ರೈಲ್ವೇ ನಿಲ್ದಾಣದ ಮೂಲಕ ಬೇರೇ ಬೇರೆ ರೆಸ್ಟೋರೆಂಟ್‍ಗಳಿಗೆ, ಹೊಟೇಲ್‍ಗಳಿಗೆ ಮಾಂಸ ಸರಬರಾಜಾಗುತ್ತಿದ್ದು, ಆಹಾರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಥರ್ಮಾಕೋಲ್ ಬಾಕ್ಸ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಅದನ್ನು ವಿವಿಧ ರಾಸಾಯನಿಕಗಳಿಂದ ತೊಳೆದು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕ ದೃಷ್ಟಿಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು. ಹಲವು ರೋಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜು.26 ರಂದು ಸಂಜೆ ಬೆಂಗಳೂರು ಮೆಜೆಸ್ಟಿಕ್ ಗೆ ರಾಜಸ್ಥಾನದಿಂದ 90 ಬಾಕ್ಸ್ ಗಳಲ್ಲಿ ಮಾಂಸ ಬಂದಿದ್ದು, ಅದು ದುರ್ವಾಸನೆಯಿಂದ ಕೂಡಿತ್ತು. ಈ ಸಂದರ್ಭದಲ್ಲಿ ಪರಿಶೀಲನೆ ಮಾಡುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದರು. ಆಗ ಅಲ್ಲಿದ್ದ ಅಬ್ದುಲ್ ರಝಾಕ್ ಎಂಬಾತ ಪರಿಶೀಲನೆ ಮಾಡಲು ಇಲಾಖೆಯವರಿಗೆ ಅಡ್ಡಿಪಡಿಸಿದ್ದ. ಆದರೆ ರಝಾಕ್ ಮೇಲೆ ಯಾವುದೇ ಕ್ರಮಕೊಳ್ಳಲಾಗಿಲ್ಲ. ಇದೊಂದು ಕೋಟ್ಯಾಂತರ ರೂಪಾಯಿಗಳ ಅಕ್ರಮ ಮಾಂಸದ ದಂಧೆಯಾಗಿದ್ದು, ಹಣಕ್ಕಾಗಿ ಅತ್ಯಂತ ಕಳಪೆ ಮಟ್ಟದ ಆಹಾರವನ್ನು ಸಾರ್ಜಜನಿಕರಿಗೆ ನೀಡಿ ಅವರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ತಕ್ಷಣ ಈ ಕುರಿತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಮತ್ತು ಮಾಂಸದ ರೂವಾರಿಯನ್ನು ಬಂಧಿಸಬೇಕು. ಅಲ್ಲದೆ ಮಾಂಸದ ಗುಣಮಟ್ಟ ಪರಿಶೀಲನೆ ಮಾಡಲು ಪೊಲೀಸ್ ಹಾಗೂ ಆರೋಗ್ಯ ಇಲಾಖೆಗೆ ಒತ್ತಾಯಿದ ಪುನಿತ್ ಕೆರೆಹಳ್ಳಿ ಅವರನ್ನು ಬಂಧಿಸಿ ಶಾಂತಿ ಭಂಗ, ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಅವರ ಮೇಲೆ ಎಸಿಪಿ ದೌರ್ಜನ್ಯ ಎಸಗಿದ್ದಾರೆ. ತಕ್ಷಣ ಎಸಿಪಿ ಚಂದನ್ ಕುಮಾರ್ ಮೇಲೆ ಕಾನೂನು ಕ್ರಮ ಜರುಗಿಸಿ ಅವರನ್ನು ಅಮಾನತು ಮಾಡಬೇಕೆಂದು ಎಂದು ಸಮಿತಿ ಅವರು ಮನವಿಯಲ್ಲಿ ಆಗ್ರಹಿಸಿದೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಮರು ನಾಮಕರಣ ಖಂಡನೀಯ :
ತ್ತೂರು: ಪ್ರಸ್ತುತ ರಾಜ್ಯ ಸರಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದು ಇದು ಖಂಡನೀಯ ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ತಿಳಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿ, ಇದು ಶ್ರೀರಾಮನ ದ್ವೇಷದ ಪರಮಾವಧಿಯಾಗಿದೆ. ರಾಮನಗರದ ಶ್ರೀರಾಮ ದೇವರ ಬೆಟ್ಟದಲ್ಲಿ ಸರಿಸುಮಾರು ಒಂದು ಒಂದು ವರ್ಷಗಳ ಕಾಲ ವಾಸವಾಗಿದ್ದ ೈತಿಹ್ಯ ಸ್ಥಳವಾಗಿದ್ದು, ಪವಿತ್ರ ಪಾವನ ಭೂಮಿಯಾಗಿದೆ. ಆದರೆ ರಾಜ್ಯ ಸರಕಾರದ ಶ್ರೀರಾಮನ ಬಗ್ಗೆ ಇರುವ ದ್ವೇಷದಿಂದ ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲು ಹೊರಟಿರುವುದು ಖಂಡನೀಯ ಎಂದು ಸ,ಮಿತಿ ತಿಳಿಸಿದೆ.
ಮನವಿ ನೀಡುವ ಸಂದರ್ಭ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಚಂದ್ರ ಮೊಗವೀರ, ಹರಿಪ್ರಸಾದ್ ರೈ ನೆಲ್ಲಿಕಟ್ಟೆ, ಕೃಷ್ಣಪ್ರಸಾದ್ರ ಬೆಟ್ಟ, ಬಾ೧ಚಂದ್ರ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.