ಡಿಜೆ ವಾಹನಕ್ಕೆ ತಗುಲಿದ ಹೈಟೆನ್ಷನ್ ತಂತಿ | 9 ಮಂದಿ ಮೃತ್ಯು, ಹಲವಾರು ಮಂದಿಗೆ ಗಾಯ

ಬಿಹಾರ : ಡಿಜೆ ವಾಹನಕ್ಕೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ವಿದ್ಯುತ್ ಶಾಕ್‍ ನಿಂದ 9 ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಸುಲ್ತಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಧ್ಯರಾತ್ರಿ ವೇಳೆ ಡಿಜೆ ವಾಹನ ಸಂಚರಿಸುವಾಗ ಹೈಟೆನ್ಸನ್ ತಂತ್ತಿಗೆ ಸಿಲುಕಿದೆ. ಪರಿಣಾಮ ಸಾವು-ನೋವು ಸಂಭವಿಸಿದೆ. ಡಿಜೆ ವಾಹನವು ತುಂಬಾ ಎತ್ತರವಾಗಿತ್ತು. ರಾತ್ರಿ ವೇಳೆ ಹೈಟೆನ್ಷನ್ ತಂತಿ ಅಡ್ಡಲಾಗಿ ಹಾದು ಹೋಗಿದ್ದು ಕಾಣಿಸಿಲ್ಲ. ತಂತಿ ತಾಗಿದೊಡನೆ 9 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಗಾಯಗೊಂಡವರನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top