ಓದಲು ಹಠ ಹಿಡಿದ ಮಗ | ಗೋಣಿ ಚೀಲದಲ್ಲಿ ಕಟ್ಟಿ ಮಗನನ್ನು ಕೆರೆಗೆ ಎಸೆದ ತಂದೆ

ಹೈದ್ರಾಬಾದ್ : ಮಕ್ಕಳು ಮಾತು ಕೇಳಲ್ಲ, ಓದು ಅಂದ್ರೆ ರಚ್ಚೆ ಹಿಡಿತಾವೆ, ಹೋಮ್‌ವರ್ಕ್ ಮಾಡು ಅಂದ್ರೆ ನೆಪ ತಗಿತಾವೆ. ಅದಕ್ಕೆ ಅವರನ್ನು ರಮಿಸಿ, ಮುದ್ದು ಮಾಡಿ, ಕೊನೆಗೆ ಗದರಿಸಿಯಾದ್ರೂ ಓದಲು ಕೂರಿಸುವ ತಂದೆ ತಾಯಿ ನಮಗೆ ಕಾಣ ಸಿಗ್ತಾರೆ, ಆದ್ರೆ ಇದಕ್ಕೆ ಅಪವಾದ ಎಂಬಂತೆ ಘಟನೆಯೊಂದು ನಡೆದಿದೆ.

ತೆಲಂಗಾಣದ ಮೆಹಬೂಬ್‌ ನಗರದಲ್ಲಿರುವ ಕೊಲ್ಲಾಪುರದಲ್ಲಿ ಒಬ್ಬ ತಂದೆ ತನ್ನ ಮಗ ಸರಿಯಾಗಿ ಓದುತ್ತಿಲ್ಲ, ಹೇಳಿದ ಮಾತು ಕೇಳುತ್ತಿಲ್ಲ ಎಂದು ಗೋಣಿ ಚಿಲದಲ್ಲಿ ಕಟ್ಟಿ ಕೆರೆಗೆ ಎಸೆದಿದ್ದಾನೆ.

ಮೆಹಬೂಬ ನಗರದ ವಾಸಿಯೊಬ್ಬ ತನ್ನ ಮಗನ ನಡುವಳಿಕೆಯಿಂದ, ಓದಲು ಹಠ ಮಾಡುವುದನ್ನು ನೋಡಿ ಕೇಳಿ ರೋಸಿ ಹೋಗಿದ್ದು, ಅವನನ್ನು ಚೆನ್ನಾಗಿ ಥಳಿಸಿ ಕೈಕಾಲು ಕಟ್ಟಿ ಒಂದು ಗೋಣಿಚೀಲದಲ್ಲಿ ಇಳಿಸಿ, ಅದನ್ನು ಆಟೋರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಹತ್ತಿರದ ಕೆರೆಯೊಂದರಲ್ಲಿ ಎಸೆದು ಹೋಗಿದ್ದಾನೆ. ಈ ಘಟನೆ ನಡೆಯುವ ವೇಳೆ ಅಲ್ಲಿಯೇ ಇದ್ದ ಕುರಿಗಾಹಿಯೊಬ್ಬ ಇದನ್ನು ಗಮನಿಸಿದ್ದಾನೆ. ಏನಿದೆ ಚೀಲದಲ್ಲಿ ಎಂದು ಕೂಡ ಕೇಳಿದ್ದಾನೆ. ಅದಕ್ಕೆ ಬಾಲಕನ ತಂದೆ, ಚೀಲದಲ್ಲಿರೊದು ನಾಯಿ ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ.































 
 

ಕುರಿಗಾಹಿಗೆ ಅನುಮಾನ ಬಂದು, ಗೋಣಿಚೀಲವಿದ್ದ ಕಡೆಗೆ ಓಡಿ ಬಂದು ಬಿಚ್ಚಿ ನೋಡಿದ್ದಾನೆ. ಆವಾಗ ಚೀಲದಲ್ಲಿ ಬಾಲಕ ಅಳುತ್ತಿರೋದನ್ನ ಕಂಡು ಅವಕ್ಕಾಗಿ ಹೋಗಿದ್ದಾನೆ. ಸದ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕನ ತಂದೆಯ ವಿರುದ್ಧ ಆಕ್ರೋಶದ ಮಾತುಗಳನ್ನು ಆಡುತ್ತಿದ್ದಾರೆ ನೆಟ್ಟಿಗರು. ಇನ್ನು ಬಾಲಕನ ತಂದೆಯನ್ನು ಸಾಗರ್ ಕರ್ನೂಲ್ ಎಂದು ಗುರುತಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top