ಗ್ರಾಹಕರ ವರ್ಗ ಸಂಸ್ಥೆಯ ಮೇಲಿಟ್ಟ ಅಚಲವಾದ ನಂಬಿಕೆ, ವಿಶ್ವಾಸಕ್ಕೆ ಚಿರಋಣಿ : ಚಿದಾನಂದ ಬೈಲಾಡಿ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಪ್ರಸ್ತುತ ವರ್ಷದಲ್ಲಿ 1.50 ಕೋಟಿ ಲಾಭ, ಸದಸ್ಯರಿಗೆ ಶೇ.14 ಡಿವಿಡೆಂಡ್ ಘೋಷಣೆ

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದ.ಕ. ಜಿಲ್ಲೆಗೆ ಪುತ್ತೂರು ತಾಲೂಕು ಕೇಂದ್ರ ಸ್ಥಾನವಾಗಿದ್ದು, ಮೊಳಹಳ್ಳಿ ಶಿವರಾಯರಂತಹ ಹಿರಿಯ ಸಹಕಾರಿ ಧುರೀಣರ ದೂರದೃಷ್ಟಿಯಿಂದ ಪುತ್ತೂರಿನಲ್ಲಿ ಇವತ್ತು ಸಾಕಷ್ಟು ಸಹಕಾರ ಸಂಸ್ಥೆಗಳು ಬೆಳೆದು ನಿಂತಿದೆ. ಈ ಹಿನ್ನಲೆಯಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಗೌಡ ಸಮುದಾಯದ ಸಂಘಟನೆಯು ಹಲವಾರು ದಶಕದ ಹಿಂದೆಯೇ ಪ್ರಾರಂಭಗೊಂಡಿದ್ದು, ಡಿ.ವಿ ಸದಾನಂದ ಗೌಡ ಶಾಸಕರಾಗಿದ್ದಾಗ ಅವರ ಸಲಹೆಯಂತೆ ಒಕ್ಕಲಿಗ ಗೌಡ ಸೇವಾ ಸಂಘ (ರಿ) ಪುತ್ತೂರು, ನೂತನ ಬೈಲಾದೊಂದಿಗೆ ನೋಂದಣಿಗೊಂಡು ಇಡ್ಯಡ್ಕ ಮೋಹನ ಗೌಡರ ಸಾರಥ್ಯದಲ್ಲಿ 20 ಮಂದಿ ಪ್ರವರ್ತಕರ ತಂಡ, ಕುರುಂಜಿ ವೆಂಕಟರಮಣ ಗೌಡ, ಗುಂಡ್ಯ ಅಣ್ಣಯ್ಯ ಗೌಡ, ಕಮ್ಮಾರ ಬಾಲಕೃಷ್ಣ ಗೌಡ, ಸಿ.ಪಿ ಜಯರಾಮ ಗೌಡ ಮುಂತಾದ ಹಿರಿಯರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ 2002ರಲ್ಲಿ ಪರಮಪೂಜ್ಯ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಜಗನ್ನಾಥ ಬೊಮ್ಮೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತ್ತು. ತದನಂತರ 2009ರಲ್ಲಿ ಕಡಬ, 2011ರಲ್ಲಿ ಉಪ್ಪಿನಂಗಡಿ, 2014ರಲ್ಲಿ ನೆಲ್ಯಾಡಿ, 2015 ಕುಂಬ್ರ,  2020 ರಲ್ಲಿ ಆಲಂಕಾರು, 2021 ರಲ್ಲಿ ಪುತ್ತೂರು ಎಸ್‍ ಎಂಟಿ,  2022ರಲ್ಲಿ ಕಾಣಿಯೂರು, 2023ರಲ್ಲಿ ಬೆಳ್ಳಾರೆ ಶಾಖೆ ಮತ್ತು ಪ್ರಸ್ತುತ 2024ರಲ್ಲಿ ವಿಟ್ಲ ಶಾಖೆಯನ್ನು ತೆರೆಯಲಾಯಿತು. ಪ್ರಸ್ತುತ 10 ಶಾಖೆಗಳು ಸಕ್ರೀಯವಾಗಿ ವ್ಯವಹಾರವನ್ನು ನಡೆಸುತ್ತಾ ಇದ್ದು, ಸುಮಾರು 7,200ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಸುಮಾರು 3.78 ಕೋಟಿ ಪಾಲುಬಂಡವಾಳ ಹೊಂದಿರುತ್ತದೆ ಎಂದರು.

ಇತ್ತೀಚಿಗೆ ಎಲ್ಲಾ ಶಾಖೆಗಳನ್ನು ಆಧುನೀಕರಣಗೊಳಿಸಲಾಗಿದ್ದು, ಕಳೆದ ಒಂಭತ್ತು ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ಸತತ ‘ಎ’ ತರಗತಿ ಶ್ರೇಣಿಯನ್ನು ಪಡೆಯುತ್ತಾ ಇದೆ. ವ್ಯವಹಾರಗಳು ಇನ್ನಷ್ಟು ಪರಿಪೂರ್ಣವಾಗಲು ಎಲ್ಲಾ ಶಾಖೆಗಳಿಗೆ ಸ್ಥಳೀಯ ಪ್ರಮುಖರ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಈ ರೀತಿ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು ರೂ. 542 ಕೋಟಿ ಮಿಕ್ಕಿ ವ್ಯವಹಾರ ಮಾಡಲಾಗಿದ್ದು, 1.50 ಕೋಟಿ ರೂ. ಲಾಭಾಂಶ ಪಡೆಯಲಾಗಿದೆ.



































 
 

ಸಂಸ್ಥೆಯ ಮೇಲಿಟ್ಟ ಅಚಲವಾದ ನಂಬಿಕೆ, ಪ್ರೋತ್ಸಾಹ ಮತ್ತು ಸಹಕಾರಗಳಿಗೆ ನಾವು ಎಂದೆಂದೂ ಚಿರಋಣಿಗಳು. ಪರಿಪೂರ್ಣವಾದ ಆಡಳಿತ ಮಂಡಳಿ, ಉಪಾಧ್ಯಕ್ಷರು ಮತ್ತು ನಿರ್ದೇಶಕರು, ಸಲಹಾ ಸಮಿತಿ, ಅಂತರಿಕ ಲೆಕ್ಕಪರಿಶೋಧಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಶಾಖಾ ಪ್ರಬಂಧಕರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಮತ್ತು ಅವಿರತ ಪರಿಶ್ರಮ ಹಾಗೂ ಗ್ರಾಹಕ ಬಂಧುಗಳ ಸಹಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ತಮ್ಮೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ, ಸಹಕಾರ ಮತ್ತು ಆಶೀರ್ವಾದಗಳೊಂದಿಗೆ ಸಂಘವು ಇನ್ನಷ್ಟು ಯಶಸ್ವಿನತ್ತ ಮುನ್ನುಗ್ಗಲಿ, ಎಲ್ಲರಿಗೂ ಭಗವಂತನ ಅನುಗ್ರಹ ಸದಾ ಇರಲಿ ಎಂದು ಹೇಳಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಮೋಹನ ಗೌಡ ಇಡ್ಯಡ್ಕ, ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೋಡಿಂಬಾಳ, ಸಂಜೀವ ಗೌಡ ಕೆ., ಸತೀಶ್‍ ಪಾಂಬಾರು, ಪ್ರವೀಣ್‍ ಕುಂಟ್ಯಾನ, ಲೋಕೇಶ್‍ ಚಾಕೋಟೆ, ಸುಪ್ರೀತಾ, ತೇಜಸ್ವಿನಿ ಶೇಖರ ಗೌಡ, ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಪಿಎಂಸಿ ಶಾಖಾ ಮ್ಯಾನೇಜರ್ ತೇಜಸ್ವಿನಿ ತಿಳುವಳಿಕೆ ಪತ್ರ ವಾಚಿಸಿದರು. ನೆಲ್ಯಾಡಿ ಶಾಖಾ ವ್ಯವಸ್ಥಾಪಕ ವಿನೋದ್ ರಾಜ್ 2022-23ನೇ ಸಾಲಿನ ಮಹಾಸಭೆಯ ನಡಾವಳಿ ವಾಚಿಸಿದರು. ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕಿ ರೇವತಿ 2023-24ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ಕಚೇರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ. ಲೆಕ್ಕಪತ್ರ ಮಂಡಿಸಿದರು. ವಿಟ್ಲ ಶಾಖಾ ಪ್ರಬಂಧಕ ದಿನೇಶ್‍ ಪಿ. ಲೆಕ್ಕಪರಿಶೋಧನಾ ವರದಿ ಮಂಜೂರಾತಿ ಮತ್ತು ನ್ಯೂನತೆಗಳ ಸಮಜಾಯಿಷಿ ವಾಚಿಸಿದರು. ಕುಂಬ್ರ ಶಾಖಾ ಪ್ರಬಂಧಕ ಹರೀಶ್‍ ಅಂದಾಜು ಬಜೆಟ್‍ ಗಿಂತಲೂ ಜಾಸ್ತಿ ಖರ್ಚಾದ ಐವೇಜುಗಳ ಮಂಜೂರಾತಿ ಪತ್ರ ವಾಚಿಸಿದರು. ಕಡಬ ಶಾಖಾ ವ್ಯವಸ್ಥಾಪಕ ಶಿವಪ್ರಸಾದ್‍ ಅಂದಾಜು ಬಜೆಟ್ ವಾಚಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top