ಪುತ್ತೂರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಲ್ಲಿರುವ ಮಡ್ಯಂಗಳ ಎಂಬಲ್ಲಿ ಅಪಾಯಕಾರಿಮರಗಳು ಹಾಗೂ ವಿದ್ಯುತ್ ಕಂಬಳಗಳನ್ನು ಭಾನುವಾರ ತೆರವು ಮಾಡಲಾಯಿತು.

ಕಳೆದ ಮಂಗಳವಾರ ಭಾರೀ ಮಳೆಗೆ ಶೇಖಮಲೆ ಭಾಗದಲ್ಲಿ ಗುಡ್ಡ ಜರಿದು ಮಣ್ಣು ರಾಜ್ಯ ಹೆದ್ದಾರಿಯನ್ನು ಆವರಿಸಿತ್ತು. ಈ ಸಂದರ್ಭ ಮಾಣಿ-ಮೈಸೂರು ಸಂಚಾರ ಬಂದ್ ಮಾಡಲಾಗಿತ್ತು. ಬಳಿಕ ಸ್ಥಳೀಯರ ನೆರವಿನೊಂದಿಗೆ ಮಣ್ಣು ತೆರವು ಕಾರ್ಯ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಇಲ್ಲಿರುವ ಅಪಾಯಕಾರಿ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವು ಮಾಡುವಂತೆ ಒತ್ತಾಯಿಸಿದ್ದರು.

ಅದರಂತೆ ಭಾನುವಾರ ಈ ಭಾಗದಲ್ಲಿ ರಸ್ತೆ ಬದಿಗಳಲ್ಲಿರುವ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆಯವರು ಹಾಗೂ ವಿದ್ಯುತ್ ಕಂಬಗಳನ್ನು ಮೆಸ್ಕಾಂ ವತಿಯಿಂದ ತೆರವು ಮಾಡಲಾಯಿತು.