ಪುತ್ತೂರು: ನ್ಯಾಯಾಲಯದಿಂದ ವಾರಂಟ್ ಆರೋಪಿಯೊಬ್ಬನನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರ್ಪುಂಜ ಎಂಬಲ್ಲಿ ಬಂಧಿಸಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆತನಿಗೆ ಶಿಕ್ಷಾಧೀನ ಖೈದಿಯಾಗಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಬಿಡುವಂತೆ ಆದೇಶಿಸಿದೆ.
ಆರೋಪಿ ಒಳಮೊಗ್ರು ಗ್ರಾಮದ ಕಮಲಾಕ್ಷ ಎಂಬವರ ಪುತ್ರ ದಿನೇಶ್ ಪಿ. ಎಂಬಾತನಿಗೆ ಪ್ರಕರಣವೊಂದರಲ್ಲಿ ಪುತ್ತೂರು ನ್ಯಾಯಾಲಯ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿತ್ತು. ಬಳಿಕ ಆರೋಪಿ ಈ ಕುರಿತು ಉಚ್ಛನ್ಯಾಯಾಲಯಕ್ಕೆ ಅಪೀಲು ಅರ್ಜಿ ಸಲ್ಲಿಸಿದ್ದ. ಉಚ್ಛನ್ಯಾಯಾಲಯ ವಿಚಾರಣೆ ನಡೆಸಿ ಈತನಿಗೆ ಶಿಕ್ಷೆಯನ್ನು ಖಾಯಂಗೊಳಿಸಿತ್ತು.
ಅದರಂತೆ ಆರೋಪಿಯನ್ನು ಬಂಧಿಸುವಂತೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.