ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಮಹಾಸಭೆ : 1.54 ಕೋಟಿ ರೂ. ಲಾಭ, ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ

ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ 2023-24ನೇ ಸಾಲಿನಲ್ಲಿ 1.54 ಕೋಟಿ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಬ್ಯಾಂಕ್ ನ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ತಿಳಿಸಿದ್ದಾರೆ.

ಭಾನುವಾರ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ 115ನೇ ವರ್ಷದ ಮಹಾಸಭೆ ಹಾಗೂ ಸಹಕಾರಿ ಪಿತಾಮಹ ದಿ. ಮೊಳಹಳ್ಳಿ ಶಿವರಾಯರ 144ನೇ ಜನ್ಮದಿನಾಚರಣೆ ಅಂಗವಾಗಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾಲಿ ವರ್ಷಾಂತ್ಯದಲ್ಲಿ ಸಂಘದಲ್ಲಿ 9168 ಸದಸ್ಯರಿದ್ದು, 1869 ಮಂದಿ ಸಹಸದಸ್ಯರಾಗಿದ್ದಾರೆ. ರೂ. 2.73 ಕೋಟಿ ಪಾಲು ಬಂಡವಾಳ ಹೊಂದಿದ್ದು, ವರ್ಷಾಂತ್ಯದಲ್ಲಿ 73.44 ಕೋಟಿ ಠೇವಣಾತಿ ಇದೆ. ವರ್ಷಾಂತ್ಯದಲ್ಲಿ 6341 ಸಾಲಗಳ ಬಾಬ್ತು 47.02 ಲಕ್ಷ ರೂ. ಹೊರಬಾಕಿ ಇರುತ್ತದೆ ಎಂದರು.































 
 

ಸಂಘದಲ್ಲಿ ವಿವಿಧ ರೀತಿಯ ಸಾಲ ನೀಡಿಕೆಯ ಪ್ರಮಾಣವನ್ನು ವೃದ್ಧಿಸುವುದು, ಹೊಸದಾಗಿ ಶಾಖೆಗಳನ್ನು ವಿಸ್ತರಣೆ ಮಾಡುವುದು, ಸೋಲಾರ್ ಅಳವಡಿಕೆ, ಸಿಬ್ಬಂದಿಗೆ ಹೆಚ್ಚಿನ ಕ್ಷಮತೆಗಾಗಿ ತರಬೇತಿ ನೀಡುವುದು, ಬ್ಯಾಂಕ್‌ನಲ್ಲಿ ಆದ್ಯತೆಯಲ್ಲಿ ಡಿಜಿಟಲೀಕರಣ ವ್ಯವಸ್ಥೆ ಅಳವಡಿಸಿಕೊಳ್ಳುವ ಸೇರಿದಂತೆ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಕಿಶೋರ್ ಕೊಳತ್ತಾಯ ಸಭೆಗೆ ತಿಳಿಸಿದರು.

ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ ಶೆಟ್ಟಿ ವರದಿ ವಾಚಿಸಿದರು. ಬ್ಯಾಂಕ್ನ ಕ್ಷೇಮನಿಧಿಯು ವರದಿ ವರ್ಷದಲ್ಲಿ 3.99 ಕೋಟಿ ಗೆ ಏರಿಕೆಯಾಗಿದೆ. ಇತರ ನಿಧಿಗಳು 12.44 ಕೋಟಿ ಏರಿಕೆಯಾಗಿದೆ. ಮರಣೋತ್ತರ ನಿಧಿಯಿಂದ 12 ಮಂದಿ ಮೃತ ಸದಸ್ಯರ ವಾರೀಸುದಾರರಿಗೆ ತಲಾ 5 ಸಾವಿರದಂತೆ ರೂ.60 ಸಾವಿರ ಪಾವತಿಸಲಾಗಿದೆ. ಆಡಳಿತ ಮಂಡಳಿಯ ಸದಸ್ಯರು ಯಾವುದೇ ಭತ್ತೆಯನ್ನು ಪಡೆದಿಲ್ಲ ಎಂದರು.
ಬ್ಯಾಂಕ್‌ನ ಮಹಾಪ್ರಬಂಧಕರ ಶೀಘ್ರ ನೇಮಕ ಮಾಡುವುದು, ಲಾಂಭಾಂಶವನ್ನು ಸಮಾಜಕ್ಕೆ ಹೆಚ್ಚು ವಿನಿಯೋಗಿಸುವುದು, ಮಳೆಕೊÊಲು, ಹಣ್ಣಿನ ಗಿಡಗಳ ನೆಡುವುದು, ಮನ್ನಾ ಮಾಡಿದ ಸಾಲಗಳ ಕುರಿತು ಮುಂದಿನ ಮಹಾಸಭೆಯ ವರದಿಯಲ್ಲಿ ಮಾಹಿತಿ ನೀಡುವುದು ಸೇರಿದಂತೆ ಸದಸ್ಯರ ಸಲಹೆಗಳನ್ನು ಪಡೆದುಕೊಳ್ಳಲಾಯಿತು. ಸದಸ್ಯರಾದ ಇ. ಶಿವಪ್ರಸಾದ್, ರಾಜೇಶ್ ಬನ್ನೂರು, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಚನಿಲ ತಿಮ್ಮಪ್ಪ ಶೆಟ್ಟಿ, ಸುದರ್ಶನ್ ಮುರ ಮೊದಲಾದವರು ಸಲಹೆ -ಸೂಚನೆಗಳನ್ನು ನೀಡಿದರು.

ಸನ್ಮಾನ

ಕಾರ್ಯಕ್ರಮದಲ್ಲಿ ಬ್ಯಾಂಕ್ ನ ಹಿರಿಯ ಸದಸ್ಯರಾದ ಮೋನಪ್ಪ, ಭಾಸ್ಕರ ಆಚಾರ್ಯ ಎನ್., ಬಾಳಪ್ಪ ಗೌಡ ಕೆ., ಜಯರಾಮ ಭಟ್ ಎಂ., ಗೋಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್

ಪುತ್ತೂರಿನ ಪದವಿ ಕಾಲೇಜುಗಳಲ್ಲಿ ದ್ವಿತೀಯ ಬಿಕಾಂನಲ್ಲಿ ಅಧಿಕ ಅಂಕ ಗಳಿಸಿದವರಿಗೆ ಬ್ಯಾಂಕ್ನ ಶತಮಾನೋತ್ಸವ ವಿದ್ಯಾರ್ಥಿ ವೇತನ, ದಿ. ಮೊಳಹಳ್ಳಿ ಶಿವರಾಯರಿಂದ ಸ್ಥಾಪಿಸಲ್ಪಟ್ಟ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸೆಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಿವರಾಯ ಶತಾಬ್ದಿಯ ವಿದ್ಯಾರ್ಥಿ ವೇತನ, ದಿ. ಬಿ. ಗಣಪತಿ ವಿಷ್ಣು ಹೊಳ್ಳ ಸ್ಕಾಲರ್ ಶಿಪ್, ಎಂಜಿನಿಯರಿAಗ್ ಪದವಿಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ನೆಲ್ಲಿಕಟ್ಟೆ ಸರಕಾರಿ ಶಾಲೆಯ ಹಾಗೂ ಬೊಳುವಾರು ಸರಕಾರಿ ಶಾಲೆಯ 6 ನೇ ತರಗತಿಯಲ್ಲಿ ಅಧಿಕ ಅಂಕ ಪಡೆದವರಿಗೆ ಸ್ಕಾಲರ್ ಶಿಪ್, ಪುತ್ತೂರು ಪಟ್ಟಣದಲ್ಲಿ ಎಸೆಸೆಲ್ಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸ್ಕಾಲರ್ ಶಿಪ್ ನೀಡಿ ಗೌರವಿಸಲಾಯಿತು.

ಬ್ಯಾಂಕ್‌ನ ನಿರ್ದೇಶಕರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಸದಾಶಿವ ಪೈ, ಕಿರಣ್ ಕುಮಾರ್ ರೈ, ಚಂದ್ರಶೇಖರ ಗೌಡ ಕೆ., ಎ.ವಿ. ನಾರಾಯಣ, ವಿನೋದ್ ಕುಮಾರ್, ಮಲ್ಲೇಶ್ ಕುಮಾರ್, ರಮೇಶ್ ನಾಯ್ಕ ಕೆ., ಜಯಂತಿ, ಹೇಮಾವತಿ, ಗಾಯತ್ರಿ ಪಿ., ಅರವಿಂದ ಕೃಷ್ಣ, ಲೆಕ್ಕಪರಿಶೋಧಕ ಅನೀಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತನ್ವಿ ಶೆಣೈ ಕೊಡ್ಗಿ ವಂದೇ ಮಾತರಂ ಹಾಡಿದರು. ಬ್ಯಾಂಕ್‌ನ ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ ಸ್ವಾಗತಿಸಿ, ಹಿರಿಯ ಸಹಾಯಕಿ ಜ್ಯೋತಿ ಎನ್.ಎಸ್. ಹಾಗೂ ಕಿರಿಯ ಸಹಾಯಕ ಪವನ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top