ಭವಿಷ್ಯದ ಸುಂದರ ಬದುಕಿನ ಕನಸಿನೊಂದಿಗೆ ಹೆಜ್ಜೆ ಹಾಕಬೇಕಾಗಿದ್ದ ಬಾಲಕ ಮಾ.ಧನ್ವಿತ್ ತೀವ್ರ ಅನಾರೋಗ್ಯಕ್ಕೀಡಾಗಿ ನಿನ್ನೆ ಬೆಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಕಡಬ ತಾಲೂಕಿನ ಸವಣೂರು ಗ್ರಾಮದ ಕೇಕುಡೆ ನಿವಾಸಿ ಮೋನಪ್ಪ ಪೂಜಾರಿ ಹಾಗೂ ವನಿತಾ ದಂಪತಿ ಕಿರಿಯ ಪುತ್ರ 13 ವರ್ಷದ ಧನ್ವಿತ್ ಮೃತಪಟ್ಟ ಬಾಲಕ.
ಮಧ್ಯಾಹ್ನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.