ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುತ್ತೂರು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪುತ್ತೂರು ಪುರಭವನದಲ್ಲಿ ಶನಿವಾರ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನ ಸಂಖ್ಯೆ ಕುರಿತು ಗಂಭೀರವಾಗಿ ಪರಿಗಣಿಸದಿರುವುದು ಅಪಾಯ. ಈ ರೀತಿ ಜನಸಂಖ್ಯೆಯನ್ನು ಕಂಟ್ರೋಲ್ ಮಾಡದಿದ್ದರೆ ದೇಶದ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋದೀತು ಎಂಬುದನ್ನು ತಿಳಿಕೊಳ್ಳಬೇಕಾದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಇದರಿಂದಾಗುವ ಪರಿಣಾಮದ ಕುರಿತು ಯುವಪೀಳಿಗೆಗೆ ಮನವರಿಕೆ ಮಾಡುವ ಅವಶ್ಯಕತೆಯಿದೆ. ಪಠ್ಯಪುಸ್ತಕಗಳಲ್ಲಿ ಈ ಕುರಿತು ಅಳವಡಿಸಿ ಜಾಗೃತಿ ಮೂಡಸಬೇಕಾಗಿದೆ. ಸರಕಾರ ಜಾತಿ-ಧರ್ಮ-ಮತ ಬಿಟ್ಟು ಜನಸಂಖ್ಯಾ ಸ್ಪೋಟಕಕ್ಕೆ ನಿಯಂತ್ರಣ ಹಾಕಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ,ಮತ್ತಿತರರು ಉಪಸ್ಥಿತರಿದ್ದರು.