ಬೇರಿಕೆಯಲ್ಲಿ ಗುಡ್ಡ ಕುಸಿತ | ಸೇಡಿಯಾಪು-ಬೇರಿಕೆ- ಪಡ್ನೂರು ಸಂಪರ್ಕ ರಸ್ತೆ ತಾತ್ಕಾಲಿಕ ಬಂದ್

ಪುತ್ತೂರು: ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಪಡ್ನೂರು ಗ್ರಾಮದ ಬೇರಿಕೆ ಎಂಬಲ್ಲಿ ಗುಡ್ಡ ಜರಿದಿದೆ. ಈ ನಿಟ್ಟಿನಲ್ಲಿ ಸೇಡಿಯಾಪು-ಬೇರಿಕೆ- ಪಡ್ನೂರು ಸಂಪರ್ಕ ರಸ್ತೆಯನ್ನು ತಾತ್ಕಾಲಿಕ ಮುಚ್ಚಲಾಗಿದೆ.


ಗುಡ್ಡ ಜರಿದ ಪರಿಣಾಮ ಅಲ್ಲಿಯ ಮೂರು ಕುಟುಂಬಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.


ಗುಡ್ಡ ಕುಸಿದಿರುವ ಇನ್ನೊಂದು ಭಾಗದಲ್ಲಿ ಅಂದರೆ ಬಂಟ್ವಾಳ ತಾಲೂಕಿನ ಪೆರ್ನೆಗೆ ಸಂಪರ್ಕಿಸುವ ರಸ್ತೆಯನ್ನೂ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಪರ್ಯಾಯವಾಗಿ ಉಪ್ಪಿನಂಗಡಿ-ಪುತ್ತೂರು ಸಂಪರ್ಕ ರಸ್ತೆಯಲ್ಲಿ ಸಂಚರಿಸುವಂತೆ, ಈ ಕುರಿತು ಅಗತ್ಯ ಕ್ರಮ ವಹಿಸುವಂತೆ ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಸಹಾಯ ಆಯುಕ್ತರು ಸೂಚನೆ ನೀಡಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top