ಭಾರೀ ಮಳೆ : ಪುಣ್ಚತ್ತಾರಿನ ಭಜನಾ ಮಂದಿರ, ಅಂಗಡಿಗಳಿಗೆ ನುಗ್ಗಿದ ನೀರು | ಭಜನಾ ಮಂದಿರದ ಬಳಿ ಗಂಗಾರತಿ

ಕಾಣಿಯೂರು: ಪುಣ್ಚತ್ತಾರಿನಲ್ಲಿ ಪೇಟೆಯಲ್ಲಿರುವ ಭಜನಾಮಂದಿರ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ಕಾಣಿಯೂರು-ಸುಬ್ರಹ್ಮಣ್ಯ ಸಂಪರ್ಕ ಕಡಿತಗೊಂಡಿದೆ. ಈ ಸಂದರ್ಭದಲ್ಲಿ ನೀರು ಇಳಿಕೆಯಾಗಲು ಭಜನಾ ಮಂದಿರದ ಬಳಿ ಗಂಗಾರತಿ ನಡೆಸಲಾಯಿತು.

ಕಾಣಿಯೂರಿನಲ್ಲೂ ಭಾರಿ ಪ್ರಮಾಣದಲ್ಲಿ ನೀರು ಏರಿಕೆಯಾಗಿ ತೋಟಗಳಿಗೆ ನುಗ್ಗಿದೆ. ಕಾಣಿಯೂರು ಮಠಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಈಗಾಗಲೇ ಸಂಚಾರ ಸ್ಥಗಿತವಾಗಿದೆ.

ಈ ರಸ್ತೆಯಲ್ಲಿ ಸಂಚರಿಸುವವರು ಚಾರ್ವಾಕ ಮೂಲಕ ಎಡಮಂಗಲಕ್ಕೆ ಸಂಚರಿಸಿ ಅಲ್ಲಿಂದ ಸಾಗಬಹುದು ಮತ್ತು ಬೆಳ್ಳಾರೆ ಸುಬ್ರಹ್ಮಣ್ಯ ರಸ್ತೆಯಲ್ಲೂ ಸಂಚರಿಸಬಹುದು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top