ಇಂದಿನಿಂದ (ಜು.29) ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ‘ಜಿ.ಎಲ್.ಆಚಾರ್ಯ’ ಜ್ಯುವೆಲ್ಲರ್ಸ್ ನಲ್ಲಿ ಆಷಾಢ ಸೇಲ್ | ಚಿನ್ನ, ಬೆಳ್ಳಿಯ ಆಭರಣ ಖರೀದಿಗೆ ಆಕರ್ಷಕ ಕೊಡುಗೆ

ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲರ್ಸ್ ನಲ್ಲಿ ಜು 29 ರಿಂದ ಆಟಿ ಸೇಲ್ ಪ್ರಯುಕ್ತ ತಮ್ಮ ನೆಚ್ಚಿನ ಗ್ರಾಹಕರಿಗೆ ವಜ್ರದ ಆಭರಣಗಳು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.

ಚಿನ್ನಾಭರಣಗಳ ಖರೀದಿಯಲ್ಲಿ ಪ್ರತಿ ಗ್ರಾಂಗೆ ರೂ. 200ರ ವರೆಗೆ ಕಡಿತ ಹಾಗೂ ಪ್ರತಿ 1 ಕ್ಯಾರೆಟ್ ವಜ್ರಾಭರಣಗಳ ಖರೀದಿಯಲ್ಲಿ ರೂ. 5000 ವರೆಗೆ ಕಡಿತ ಮತ್ತು ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತಿ ಕೆ.ಜಿಗೆ 2000ರೂ ರಿಯಾಯಿತಿ ನೀಡಲಾಗುವುದು.

2024ರ ಬಜೆಟ್  ನಲ್ಲಿ ಚಿನ್ನದ ದರದಲ್ಲಾದ ಇಳಿಕೆಯ ಸಂಪೂರ್ಣ ಲಾಭವನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರಿಗೆ ಯೆಲ್ಲೋ ಟ್ಯಾಗ್ ಹೊಂದಿರುವ, ಆಶ್ಚರ್ಯಕರ ವಿಎ ಶುಲ್ಕದೊಂದಿಗೆ ವಿಶೇಷ ಆಭರಣಗಳ ಸಂಗ್ರಹವಿದ್ದು ವಿಎ ಶುಲ್ಕ 6%ನಿಂದ ಆರಂಭವಾಗುತ್ತದೆ ಮತ್ತುಈ ಆಫರ್ ಚಿನ್ನದ ಗಟ್ಟಿನಾಣ್ಯಗಳಿಗೆ ಹಾಗೂ ಯಾವುದೇ ಯೋಜನೆ ಅಥವಾ ಮಾಸಿಕ ಕಂತಿನ ಯೋಜನೆಯೊಂದಿಗೆ ಸೇರಿಸಲಾಗುವುದಿಲ್ಲ



































 
 

1957ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳು ಅನ್ವಯದೊಂದಿಗೆ ಈ ಆಫರ್ ಎಲ್ಲ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top