ಪುತ್ತೂರು: ಗಲಾಟೆಯೊಂದರ ವಿಷಯವಾಗಿ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಬನ್ನೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜನ್ ಬಂಧಿತ ಆರೋಪಿ.
ಶುಕ್ರವಾರ ರಾತ್ರಿ ವೇಳೆ ಜಿಲ್ಲಾ ಕಂಟ್ರೋಲ್ ರೂಮ್ ನಿಂದ ಬಂದ ಸೂಚನೆಯಂತೆ ಪೊಲೀಸರು ಘಟನಾ ಸ್ಥಳವಾದ ಬನ್ನೂರು ಗ್ರಾಮದ ಕುಂಜೂರು ಎಂಬಲ್ಲಿಗೆ ತೆರಳಿದ್ದು, ಈ ಸಂದರ್ಭ ಆರೋಪಿ ತೇಜಸ್ ತನ್ನ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದು, ತೇಜನ್‌ನ ತಾಯಿ ಚಂದ್ರಾವತಿಯವರು ಪಕ್ಕದ ಮನೆಗೆ ಬಂದಿರುವುದಾಗಿ ತಿಳಿಸಿದ್ದು, ಆಗ ಪೊಲೀಸ್ ಸಿಬ್ಬಂದಿ ಚಂದ್ರಾವತಿಯವರನ್ನು ವಿಚಾರಿಸುತ್ತಿರುವಾಗ ತೇಜನ್ ನು ಆತನ ಮನೆಯಿಂದ ಪೊಲೀಸರನ್ನು ನೋಡಿ ಅವಾಚ್ಯವಾಗಿ ಬೈದು, ನಮ್ಮ ಮನೆಗೆ ಪೊಲೀಸರು ಬರುವುದು ಯಾಕೆ ಎಂದು ಹೇಳಿ ಆತನ ಮನೆಯ ಅಂಗಳದಲ್ಲಿದ್ದ ಪೋರ್ಡ್ ಕಾರನ್ನು ತುರ್ತು ಸ್ಪಂದನಾ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದ್ದ. ಆ ಸಮಯ ಆತನಲ್ಲಿ ಕಾರನ್ನು ರಸ್ತೆಯಿಂದ ತೆಗೆಯಲು ಹೇಳಿದಾಗ ಆತನು ಕಾರನ್ನು ತೆಗೆಯಲು ನಿರಾಕರಿಸಿದ್ದ. ತಕ್ಷಣ ಕೂಡಲೇ ಈ ವಿಚಾರವನ್ನು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪುತ್ತೂರು ನಗರ ಠಾಣಾ ಎಎಸ್‌ಐ ಮೋನಪ್ಪ ರವರಿಗೆ ಕರೆಮಾಡಿ ಘಟನಾ ಸ್ಥಳಕ್ಕೆ ಬರುವಂತೆ ತಿಳಿಸಿದ್ದರು. ತೇಜಸ್‌ನ ಮನೆಯ ಅಂಗಳಕ್ಕೆ ಹೋಗಿ ಕಾರಿನ ಕೀಯನ್ನು ಕೊಡುವಂತೆ ಆತನಲ್ಲಿ ತಿಳಿಸಿದಾಗ, ಆತನು ಮನೆಯ ಸಿಟೌಟ್‌ನಲ್ಲಿ ನಿಂತುಕೊಂಡು ಕೀಯನ್ನು ಕೊಡದೇ, ಮನೆಯ ಒಳಗಿನಿಂದ ಕಬ್ಬಿಣದ ರಾಡ್ ಹಿಡಿದುಕೊಂಡು ಬಂದು ಏಕಾಏಕಿಯಾಗಿ ರಾಡ್‌ನಿಂದ ಬಲವಾಗಿ ಪಿಸಿ ವಿನಾಯಕರವರ ತಲೆಗೆ ಹೊಡೆಯಲು ಬೀಸಿದ್ದು, ವಿನಾಯಕ ರವರು ರಾಡ್ ಹಲ್ಲೆಯಿಂದ ತಪ್ಪಿಸಿಕೊಂಡಾಗ ರಾಡ್‌ನ ಏಟು ಅವರ ಬಲ ಭುಜಕ್ಕೆ ಬಿದ್ದಿರುತ್ತದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಕೆದಂಬಾಡಿ ಗ್ರಾಮದ ಶೀನಪ್ಪ ಗೌಡ ಎಂಬವರು ನೀಡಿದ ದೂರಿನಂತೆ ತೇಜಸ್ ನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.