ಸಂತ ಫಿಲೋಮಿನಾ ಕಾಲೇಜಿನಿಂದ 25ನೇ ಕಾರ್ಗಿಲ್ ವಿಜಯೋತ್ಸವ, ವನಮಹೋತ್ಸವ, ಪೌಷ್ಠಿಕಾಂಶ ದಿನ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಇದರ ಎನ್.ಸಿ.ಸಿ. ಘಟಕ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ , 5 ಕರ್ನಾಟಕ ಎನ್.ಸಿ.ಸಿ. ನೌಕಾ ದಳ,  ಸಂತ ಫಿಲೋಮಿನಾ  ಅನುದಾನಿತ ಪ್ರೌಢ ಶಾಲೆ ಪುತ್ತೂರು ಇದರ ಎನ್.ಸಿ.ಸಿ. ಘಟಕ 91/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ, 41A/5 ಕರ್ನಾಟಕ ಎನ್.ಸಿ.ಸಿ. ನೌಕಾ ದಳ, 44/6 ಕರ್ನಾಟಕ ವಾಯುದಳ ಮತ್ತು ಕುಡಿಪಾಡಿ ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ಜಂಟಿ ಆಶ್ರಯದಲ್ಲಿ 25ನೇ ಕಾರ್ಗಿಲ್ ವಿಜಯೋತ್ಸವ, ವನಮಹೋತ್ಸವ ಮತ್ತು ಪೌಷ್ಠಿಕಾಂಶ ದಿನಗಳನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ, ನಿವೃತ್ತ ಯೋಧ  ವಿಷ್ಣು ಪ್ರಸಾದ್ ಮಾತನಾಡಿ, ತಮ್ಮ 16 ವರ್ಷ 2 ತಿಂಗಳಿನ ಸೇನೆಯ ಜೀವನ, ಶಿಸ್ತು, ಮತ್ತು ವಿವಿಧ ಪ್ರದೇಶಗಳ ಜೀವನಕ್ರಮದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸೇನೆಯು ‘ಒಂದು ಗುಂಡು, ಒಬ್ಬ ವೈರಿ’ ಎಂಬ ದ್ಯೇಯದೊಂದಿಗೆ ಒಬ್ಬ ಸೈನಿಕ ತನ್ನನು ರಕ್ಷಿಸುವುದೊಂದಿಗೆ, ತನ್ನ ಎದುರಾಳಿಯ ಯೋಜನೆಗಳನ್ನು ನಿರ್ನಾಮ ಮಾಡುವ ಜೊತೆಯಾಗಿ ವೈರಿಯನ್ನು ಸದೆಬಡಿಯುವ ಮೂಲಕ ದೇಶವನ್ನು ರಕ್ಷಿಸುತ್ತಾರೆ. ಹಲವಾರು ಯುದ್ಧಗಳಲ್ಲಿ ದೇಶವು ಗೆಲುವು ಸಾಧಿಸಿದ್ದು, ಕಾರ್ಗಿಲ್ ಯುದ್ಧದ ಗೆಲುವು ಮತ್ತು ಪರಾಕ್ರಮವು ವಿಶ್ವದೆಲ್ಲೆಡೆ ಹರಡಲು ನಮ್ಮ ಸೈನ್ಯಧಿಕಾರಿಗಳು ಮತ್ತು ಯೋಧರು ತಮ್ಮ ಜೀವ ಲೆಕ್ಕಿಸದೆ ದೇಶಸೇವೆ ನೀಡಿರುತ್ತಾರೆ ಎಂದು ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆಯ 41A/5 ಕರ್ನಾಟಕ ಎನ್.ಸಿ.ಸಿ. ನೌಕಾದಳದ ಅಧಿಕಾರಿ ಕ್ಲೆಮೆಂಟ್ ಪಿಂಟೋ, ವನಮಹೋತ್ಸವದ ಕುರಿತಾಗಿ ಗಿಡ ಮರಗಳು ನಮಗೆ ಹಲವಾರು ಲಾಭಗಳು ನೀಡುತ್ತವೆ. ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ನ್ನು ಹೀರಿಕೊಂಡು ಆಮ್ಲಜನಕವನ್ನು ನಮಗೆ ನೀಡುತ್ತದೆ. ಜಾಗತಿಕ ತಾಪಮಾನವನ್ನು ಹತೋಟಿಯಲ್ಲಿ ತರಲು ಮತ್ತು ನಮಗೆ ಉತ್ತಮ ಮಳೆ ಪಡೆಯಲು ಮರಗಿಡಗಳನ್ನು ನೆಟ್ಟು, ಬೆಳೆಸಿ  ಪೋಷಿಸುವ ಜವಾಬ್ದಾರಿ ನಮ್ಮದಾಗಿದೆ. ಇಂದು ನಾವು  ಈ ಶಾಲೆಯಲ್ಲಿ ಹಣ್ಣು ಹಂಪಲಿನ ಗಿಡಗಳನ್ನು ನೆಡುವಾಗ ೨ ರೀತಿಯ  ಲಾಭಗಳು ನಮಗೆ ದೊರೆಯುತ್ತವೆ. ಒಂದು ಹಣ್ಣುಗಳು ನಮಗೆ  ತಿನ್ನಲು ಮತ್ತು ಉಸಿರಾಡಲು ಆಮ್ಲಜನಕವು ಪಡೆದುಕೊಳ್ಳುತ್ತೆವೆ  ಎಂದು ಹೇಳಿ ಹೇಗೆ ನಾವು ಪರಿಸರವನ್ನು ಕಾಪಾಡಬೇಕು ಮತ್ತು ಪರಿಸರ ಸಂರಕ್ಷಣೆಯಲ್ಲಿ ನಮ್ಮೆಲ್ಲರ  ಕರ್ತವ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.































 
 

ಇನ್ನೋರ್ವ ಅತಿಥಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಗೌರವಾಧ್ಯಕ್ಷ ರಾಮಜೋಯಿಸ ಮಾತನಾಡಿ, ನಾವೆಲ್ಲರೂ ಸೈನಿಕರು. ಹೇಗೆ ಗಡಿ ಕಾಯುವ ಸೈನಿಕ ತನ್ನ ಜವಾಬ್ದಾರಿಯನ್ನು ಅರಿತು ತನ್ನ ಕಾರ್ಯ ನಿಷ್ಠೆಯನ್ನು ಯಶಶ್ವಿಯಾಗಿ ನಿಭಾಯಿಸುತಾನೋ ಅದೇ ರೀತಿ ನಾವೆಲ್ಲರೂ ಸೈನಿಕರಂತೆ ನಮ್ಮ ಜವಾಬ್ದಾರಿಗಳನ್ನು ಅರಿತು ನಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಜವಾಬ್ದಾರಿಯಿಂದ  ನಿರ್ವಹಿಸಬೇಕು ಎಂದು  ಹೇಳಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ದಿನೇಶ್ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ನೆಟ್ಟ ಗಿಡಗಳನ್ನು ಪೋಷಿಸಿ ಬೆಳೆಸಬೇಕಾಗಿದೆ. ನಮ್ಮ ಸೈನಿಕರನ್ನು ನಾವು ಅತ್ಯಂತ ಗೌರವದಿಂದ ನೋಡಬೇಕು. ಸೈನ್ಯಕ್ಕೆ ಸೇರುವ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಬೇಕು. ಈ ರೀತಿ ನಮ್ಮ ದೇಶವನ್ನು ಬಲಿಷ್ಠ ದೇಶವನ್ನಾಗಿ ಮಾಡಲು ನಮ್ಮ ಸಹಕಾರ ಅತೀ ಮುಖ್ಯ ಎಂದರು.

ಕುಡಿಪಾಡಿ ಶಾಲಾ ಮುಖ್ಯ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್ ಪ್ರಾಸ್ತಾವಿಕವಾಗಿ ಮಾತನಾಡಿದರು ವೇದಿಕೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾ. ಜೋನ್ಸನ್ ಡೇವಿಡ್ ಸಿಕ್ವೇರಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆಯ ಎನ್.ಸಿ.ಸಿ. ಭೂದಳ ಅಧಿಕಾರಿ ನರೇಶ್ ಲೋಬೊ, ಎನ್.ಸಿ.ಸಿ. ವಾಯುದಳ ಅಧಿಕಾರಿ ರೋಶನ್ ಸಿಕ್ವೇರಾ ಉಪಸ್ಥಿತರಿದ್ದರು.

ಕುಡಿಪಾಡಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದ್ಯಸರು ಮತ್ತು ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು  ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿಧ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ತಯಾರಿಸಿದ ವಿವಿಧ ಪೌಷ್ಠಿಕಾಂಶ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಿ ಪೌಷ್ಠಿಕಾಂಶ ದಿನವನ್ನು ಮತ್ತು ತುಳುನಾಡಿನ ಆಟಿ ತಿಂಗಳ  ಸಂಭ್ರಮವನ್ನು ಆಚರಿಸಿದರು. 

ಶಿಕ್ಷಕ ಗಣೇಶ್ ಸ್ವಾಗತಿಸಿ, ಶಿಕ್ಷಕಿ ಅಶ್ವಿನಿ ವಂದಿಸಿದರು. ಶಿಕ್ಷಕಿ ಜಾನೆಟ್ ಸಿಕ್ವೇರಾ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top