ಕೊಕ್ಕಡ : ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಓ.ಟಿ.ಪಿ ಪಡೆದು ಲಕ್ಷಾಂತರ ರೂ ವಂಚಿಸಿದ ಪ್ರಕರಣ ಕೊಕ್ಕಡದಲ್ಲಿ ನಡೆದಿದೆ.
ಕೊಕ್ಕಡ ಗಾಣಗಿರಿ ಸುಶೀಲ ಅವರು ಅಪರಿಚಿತ ವ್ಯಕ್ತಿಯಿಂದ ವಂಚನೆಗೊಳಗಾಗಿದ್ದು, ತನ್ನ ಬ್ಯಾಂಕ್ ಖಾತೆಯಿಂದ ರೂ. 1.50 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಸುಶೀಲರವರು ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಎಟಿಎಂ ಗಾಗಿ ಅಪ್ಲಿಕೇಶನ್ ಹಾಕಿದ್ದರು. ಬಳಿಕ ಎಟಿಎಂ ಕಾರ್ಡ್ ಬಂದಿತ್ತು. ಅಪರಿಚಿತ ವ್ಯಕ್ತಿಯೊಬ್ಬರು ಸುಶೀಲ ಅವರಿಗೆ ಫೋನ್ ಮಾಡಿ ನಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ನಂಬಿಸಿ, ನಂತರ ಫೋನ್ ಮಾಡಿ ನಿಮಗೆ ಒಟಿಪಿ ಬಂದಿದೆ ನಂಬರ್ ಹೇಳಿ ಎಂದರು. ಅದರಂತೆ ಓಟಿಪಿ ನಂಬರ್ ಕೊಟ್ಟ ಸ್ವಲ್ಪ ಸಮಯದ ನಂತರ ಸುಶೀಲ ಅವರ ಖಾತೆಯಿಂದ ರೂ. 1.50 ಲಕ್ಷ ಡ್ರಾ ಆಗಿರುವುದು ಕಂಡು ಬಂದಿದೆ.