ಸಾಲಮನ್ನಾದಿಂದ ದ.ಕ.ಜಿಲ್ಲೆಯ ಸಾವಿರಾರು ಕೃಷಿಕರು ವಂಚಿತ : ಕಿಶೋರ್ ಶಿರಾಡಿ | ಮಲೆನಾಡು ಜನಹಿತ ರಕ್ಷಣಾ ವೇದಿಕೆ ಹಾಗೂ ಕಿಸಾನ್ ಸಂಘದಿಂದ ಪ್ರತಿಭಟನೆ

ಪುತ್ತೂರು : 2015ನೇ ವರ್ಷದಲ್ಲಿ ಸರಕಾರ ಮಾಡಿದ ಸಾಲ ಮನ್ನಾ ಯೋಜನೆಯು ಪೂರ್ಣ ಕಾರ್ಯಗತಗೊಳ್ಳದಿರುವುದನ್ನು ಖಂಡಿಸಿ ಮತ್ತು ಸಾಲಮನ್ನಾ ವಂಚಿತ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಪ್ರದೇಶಗಳನ್ನು ರೈತರು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಹಾಗೂ ಕಿಸಾನ್ ಸಂಘದ  ಸಹಯೋಗದೊಂದಿಗೆ ಗುರುವಾರ ಪುತ್ತೂರು ಸಹಾಯಕ ಸಹಕಾರಿ ನಿಬಂಧಕರ ಕಚೇರಿ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಆ ಬಳಿಕ ಸಹಕಾರ ಸಂಘಗಳ ಉಪನಿರ್ಬಂಧಕ ರಘು ಅವರಿಗೆ ಕ್ರಮಕ್ಕಾಗಿ ಮನವಿ ನೀಡಲಾಯಿತು.

2015 ರಲ್ಲಿ ರಾಜ್ಯ ಸರಕಾರ ಕೃಷಿಕರ ಸಾಲಮನ್ನಾ ಮಾಡಿದ್ದು, ಈ ಸಾಲಮನ್ನಾದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಕೃಷಿಕರು ವಂಚಿತರಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ತಮಗೆ ನ್ಯಾಯ ಒದಗಿಸುವಂತೆ ಸರಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಅಂದಿನ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಕೃಷಿಕರ ಸಾಲಮನ್ನಾ ಮಾಡಿತ್ತು. ಆದರೆ ಈ ಅವಕಾಶದಿಂದ ದಕ್ಷಿಣಕನ್ನಡ ಜಿಲ್ಲೆಯ ಸಾವಿರಾರು ಕೃಷಿಕರು ಇನ್ನೂ ವಂಚಿತರಾಗಿದ್ದಾರೆ. ಸಾಲಮನ್ನಾ ಮಾಡುವಂತೆ ವಂಚಿತ ಕೃಷಿಕರು ಹಲವು ಬಾರಿ ಅಧಿಕಾರಿಗಳ ಮತ್ತು ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರೂ, ಈವರೆಗೂ ಸಾಲಮನ್ನಾ ಸೌಲಭ್ಯದಿಂದ ಜಿಲ್ಲೆಯ ಕೃಷಿಕರನ್ನು ದೂರವಿಡಲಾಗಿದೆ ಎಂದು ಆರೋಪಿಸಿದರು.































 
 

ತಿಂಗಳೊಳಗೆ ಮನ್ನಾ ಮಾಡಿ :

ಒಂದು ತಿಂಗಳ ಒಳಗೆ ಜಿಲ್ಲೆಯ ಕೃಷಿಕರ ಸಾಲಮನ್ನಾ ಮಾಡದೇ ಹೋದಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ, ಡಿಆರ್ ಕಚೇರಿ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಅವರು ನೀಡಿದರು. 

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಅವರು, ಉಪವಿಭಾಗದ ಸುಮಾರು 6 ಸಾವಿರ ಕೃಷಿಕರಿಗೆ ಸುಮಾರು 64 ಕೋಟಿ ರೂಪಾಯಿಗಳಷ್ಟು ಸಾಲಮನ್ನಾ ಹಣ ಬರಬೇಕಾಗಿದ್ದು, ಇದರಲ್ಲಿ ಸುಮಾರು 1900 ಅರ್ಜಿಗಳನ್ನು ಬಿಡುಗಡೆಗೆ ಬಾಕಿ ಇರುವಚ ಅರ್ಹ ಪ್ರಕರಣಗಳೆಂದು ಗುರುತಿಸಲಾಗಿದೆ. ಬಾಕಿ ಉಳಿದ ಅರ್ಜಿಗಳಿಗೆ ಕೆಲವು ದಾಖಲೆಗಳ ಅವಶ್ಯಕತೆಯಿರುವ ಕಾರಣ ತಡವಾಗಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top