ಮಂಗಳೂರು : ಕರುಗಳ ಮಾಂಸವನ್ನು ಕುರಿ ಮಾಂಸದಲ್ಲಿ ಮಿಶ್ರಣ ಮಾಡಿ ಮಾರಲಾಗುತ್ತಿದೆ ಎಂದು ಭಜರಂಗದಳ ವಿಭಾಗೀಯ ಸಹ ಸಂಯೋಜಕ ಪುನೀತ್ ಅತ್ತಾವರ ಆರೋಪಿಸಿದ್ದಾರೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿ ಯಲ್ಲಿ ಮಾತಾನಾಡಿದ ಅವರು ಕುರಿ ಮಾಂಸದ ಹೆಸರಿನಲ್ಲಿ ಸಣ್ಣ ಸಣ್ಣ ಕರುಗಳ ಮಾಂಸ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ.ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಿದಲೂ ಅವ್ಯಾಹತವಾಗಿ ಅಕ್ರಮ ಗೋ ಸಾಗಾಟ, ಹತ್ಯೆ ಮಾಡಲಾಗುತ್ತಿದೆ. ಎಂದು ಆರೋಪಿಸಿದರು.
ಕೆಲ ಹೊಟೇಲ್‌ಗಳಲ್ಲಿ ಗೋ ಖಾದ್ಯಗಳ ಮಾರಾಟ ಮಾಡಲಾಗುತ್ತಿದೆ. ಇದನ್ನು ಹಿಂದೂಗಳಿಗೆ ತಿನ್ನಿಸಿ ಧರ್ಮ ಭ್ರಷ್ಟರನ್ನಾಗಿ ಮಾಡಲಾಗುತ್ತಿದೆ. ಮಾಂಸದ ಅಂಗಡಿಯ ಲೈಸನ್ಸ್ ಪಡೆದು ಗೋಮಾಂಸ ಮಾರಾಟ ಮಾಡುತ್ತಿದ್ದಾರೆ. ಸುರತ್ಕಲ್, ಜೋಕಟ್ಟೆ, ತಣ್ಣೀರುಬಾವಿ ಪರಿಸರದಲ್ಲಿಅಕ್ರಮ ಕಸಾಯಿಖಾನೆ ತೆರೆಯಲಾಗಿದೆ. ಈ ಬಗ್ಗೆ ದೂರು ನೀಡುತ್ತೇವೆ ಎಂದರು.
2006 ರಲ್ಲಿ ಮಂಗಳೂರಿನಲ್ಲಿ ನಡೆದ ಘಟನೆಯನ್ನು ಪೊಲೀಸ್ ಇಲಾಖೆ ನೆನಪು ಮಾಡಿಕೊಳ್ಳಬೇಕು. ಇಂತಹ ಘಟನೆ ಆಗಬಾರದೆಂದರೇ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಗೋವಿನ ರಕ್ಷಣೆ ಹಿಂದೂ ಸಮಾಜದ ಕರ್ತವ್ಯ ನಮ್ಮಮೇಲೆ ಕೇಸ್ ಆದ್ರೂ ಗೋ ರಕ್ಷಣೆ ಮಾಡೇ ಮಾಡುತ್ತೇವೆ. ಗೋರಕ್ಷಣೆ ಮಾಡಿದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಗೋ ಕಳ್ಳರ ಮೇಲೂ ಗೂಂಡಾ ಕಾಯ್ದೆ ಹಾಕಿ. ಆಗ ಈ ಗೋಕಳ್ಳತನ, ಅಕ್ರಮ ಕಸಾಯಿಖಾನೆ ಕೃತ್ಯ ಕಡಿಮೆಯಾಗುತ್ತದೆ ಎಂದರು.