ವಿಟ್ಲ : ವಿಟ್ಲ ಸಮೀಪದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಜೋಡಿಯೊಂದು ಕಾಡಿನಲ್ಲಿ ರೊಮ್ಯಾನ್ಸ್ ಮೂಡಿನಲ್ಲಿದ್ದ ಘಟನೆ ನಡೆದಿದೆ.
ಹಿಂದೆ ಈ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದು ಅಲ್ಲಿನ ಸಾರ್ವಜನಿಕರಿಗೆ ತಿಳಿದಿತ್ತು. ಅದರಂತೆ ನಿನ್ನೆ ಸಂಜೆಯೊಂದು ಜೋಡಿ ಕಳೆಂಜಿಮಲೆ ಕಾಡಿಗೆ ಬಂದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಹಾಗಾಗಿ ಅವ್ರನ್ನ ಪತ್ತೆಹಚ್ಚಲು ಹೊರಟಾಗ ಜೋಡಿ ರೊಮ್ಯಾನ್ಸ್ ಮೂಡಿನಲ್ಲಿರುವುದು ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಜೋಡಿ ಸಾರ್ವಜನಿಕರ ಕಂಡು ಎದ್ದೋ ಬಿದ್ದೋ ಎಂಬಂತೆ ಅರೆಬರೆ ಬಟ್ಟೆಯಲ್ಲೇ ಓಡಿ ಹೋಗಿದ್ದಾರೆ.
ಬಳಿಕ ಅಲ್ಲಿನ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆ, ಕಾಂಡೋಮ್, ಚಪ್ಪಲಿಗಳನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.