ಕಡಬ: ಒಕ್ಕಲಿಗ ಗೌಡ ಮಹಿಳಾ ಸಮಿತಿ ಸಭೆ ತಾಲೂಕು ಮಹಿಳಾ ಅಧ್ಯಕ್ಷೆ ವೀಣಾ ರಮೇಶ್ ಕೊಲ್ಲೇಸಾಗು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಆ.3 ರಂದು ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯುವ ಆಟಿ ಕೂಟದ ಬಗ್ಗೆ ಸುಧೀರ್ಘ ಮಾತುಕತೆ ನಡೆಯಿತು. ಬಳಿಕ ಕಾರ್ಯಕ್ರಮದ ಕುರಿತು ತಮ್ಮ ಸಲಹೆ ಸೂಚನೆಗಳ ಮೇರೆಗೆ ಜವಾಬ್ದಾರಿಗಳನ್ನು ಹಂಚಲಾಯಿತು.
ಸಭೆಯಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ತಮ್ಮಯ್ಯ ಗೌಡ, ಸಂಘದ ತಾಲೂಕು ನಿರ್ದೇಶಕ ಪ್ರವೀಣ್ ಕುಂಟ್ಯಾನ, ಕಡಬ ಸ್ಪಂದನ ಸಹಕಾರ ಸಂಘದ ನಿರ್ದೇಶಕ ಹಿರಿಯಣ್ಣ ಗೌಡ, ಅಶೋಕ್ ಶೇಡಿ, ಎಲ್ಲಾ ವಲಯದ ಉಪಾಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು.
ತಾಲೂಕು ಮಹಿಳಾ ಕಾರ್ಯದರ್ಶಿ ಲಾವಣ್ಯ ಹೇಮಂತ್ ಮಂಡೆಕರ ಸ್ವಾಗತಿಸಿದರು ಸಂಘಟನಾ ಕಾರ್ಯದರ್ಶಿ ಶಾರದ ಕೇಶವ್ ವಂದಿಸಿದರು.