ಸರಕಾರದಿಂದ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಳ ಚಿಂತನೆ | ಪೆಟ್ರೋಲ್ ದರ ಏರಿಕೆ ಬೆನ್ನಲ್ಲೇ ವಾಹನ ಸವಾರರಿಗೆ ಮತ್ತೊಂದು ಶಾಕ್

ಪೆಟ್ರೋಲ್-ಡಿಸೇಲ್ ಬೆಲೆಯಿಂದ ಕೈ ಸುಟ್ಟುಕೊಂಡಿದ್ದ ಸವಾರರಿಗೆ ಸರಕಾರ ಮತ್ತೊಂದು ಶಾಕ್ ನೀಡಿದೆ. ಅದು ಏನೆಂದರೆ ವಾಹನಗಳ ಎಮಿಷನ್ ಟೆಸ್ಟಿಂಗ್ ದರ ಏರಿಕೆಗೆ ಚಿಂತನೆ.

ಕಾರು, ಬೈಕ್, ಲಾರಿ ಹಾಗೂ ಬಸ್ಸು ಹೀಗೆ ಎಲ್ಲ ವಾಹನಗಳಿಗೂ ಪ್ರತಿ ಆರು ತಿಂಗಳಿಗೆ ಎಮಿಷನ್ ಟೆಸ್ಟ್ ಮಾಡಿಸಬೇಕು ಎಂಬುದು ನಿಯಮ. ಸದ್ಯದಲ್ಲೇ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಾಗಲಿದೆ.

ದರ ಏರಿಕೆ ಮಾಡುವಂತೆ ಸಾರಿಗೆ ಸಚಿವರಿಗೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್‌ ಈ ಕುರಿತು ಮನವಿ ನೀಡಿದೆ. ಕೊಟ್ಟಿದೆ. ರಾಜ್ಯದಲ್ಲಿ ಮೂರು ಕೋಟಿಗೂ ಹೆಚ್ಚು ವಾಹನಗಳಿವೆ. ರಾಜಧಾನಿ ಬೆಂಗಳೂರಲ್ಲೇ ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ. ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲದಿದ್ದರೆ, ಟ್ರಾಫಿಕ್ ಪೋಲಿಸರು 500 ರಿಂದ 1000 ರೂಪಾಯಿವರೆಗೆ ದಂಡ ಹಾಕುತ್ತಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲದಿದ್ದರೆ ಆರ್‌ಟಿಓ ಅಧಿಕಾರಿಗಳು ವಾಹನಗಳಿಗೆ ಎಪ್ಪಿ ಮಾಡುವುದಿಲ್ಲ. ಈ ಹಿಂದೆ ಒಂದು ವಾಹನಕ್ಕೆ ಎಮಿಷನ್ ಟೆಸ್ಟ್ ಮಾಡಿದರೆ, ಎಮಿಷನ್ ಟೆಸ್ಟಿಂಗ್ ಸೆಂಟರ್ ಗಳಿಂದ ಸರ್ಕಾರಕ್ಕೆ 3.25 ಪೈಸೆ ರೂ. ನೀಡಬೇಕಿತ್ತು ಆದರೆ ಇನ್ನು ಮುಂದೆ ಸರ್ಕಾರಕ್ಕೆ 13.80 ಪೈಸೆ ನೀಡಬೇಕಂತೆ. ಹಾಗಾಗಿ ಎಮಿಷನ್ ಟೆಸ್ಟಿಂಗ್ ಸೆಂಟರ್ ಮಾಲೀಕರು ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ.



































 
 

ಸದ್ಯ ಒಂದು ಬೈಕ್ ಎಮಿಷನ್ ಮಾಡಲು – 65 ರೂ. ತೆಗೆದುಕೊಳ್ಳಲಾಗುತ್ತಿದೆ. ಮುಂದೆ 110ರೂ.ಗೆ ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ತ್ರಿಚಕ್ರ- ( ಆಟೋ, ಗೂಡ್ಸ್ ಆಟೋ ) ಸದ್ಯ 75 ರೂ ರಿಂದ 100 ರೂ. ನಾಲ್ಕು ಚಕ್ರದ ಪೆಟ್ರೋಲ್ ಕಾರುಗಳು- ಸದ್ಯ- 115 ರುಪಾಯಿ 200 ರುಪಾಯಿ ಏರಿಕೆ ಆಗಲಿದೆ. ಎಲ್ಲಾ ಮಾದರಿಯ ಡಿಸೇಲ್ ವಾಹನಗಳು ( ಲಾರಿ, ಬಸ್ ಹಾಗೂ ಟ್ರಕ್ ) ಸದ್ಯ – 160 ರುಪಾಯಿ 250 ಏರಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top