ಪುತ್ತೂರು : ಕೊಡಿಪಾಡಿ ಶ್ರೀ ಜನಾರ್ದನ ದೇವಾಲಯದ ಬಳಿ ರಾತ್ರಿ ನಿಲ್ಲಿಸಿದ್ದ ಎರಡು ಲಾರಿಗಳಿಂದ ಬ್ಯಾಟರಿ ಕಳವಾದ ಬಗ್ಗೆ ವರದಿಯಾಗಿದೆ.

ಎರಡು ಲಾರಿಯ ಚಾಲಕರು ಕೊಡಿಪಾಡಿ ಪರಿಸರದವರಾಗಿದ್ದ ಕಾರಣ ಎಂದಿನಂತೆ ಎಂ ಡಿ ಕನ್ಸಟ್ರಂಕ್ಷನ್ ಲಾರಿಯನ್ನು ರಸ್ತೆ ಬದಿಯಲ್ಲಿ ರಾತ್ರಿ ನಿಲ್ಲಿಸಲಾಗಿತ್ತು. ಲಾರಿ ಸಂಖ್ಯೆ KA 02 AD 4271 ಹಾಗೂ ΚΑ 19 0 3224.
ಮರುದಿನ ಬೆಳಿಗ್ಗೆ ಲಾರಿ ಬಳಿ ನೋಡುವಾಗ ಬ್ಯಾಟರಿ ನಾಪತ್ತೆಯಾಗಿದ್ದು ಕಂಡುಬಂದಿದೆ. ಸುಮಾರು ನಲ್ವತ್ತು ಸಾವಿರಾರು ಬೆಲೆ ಅಂದಾಜಿಸಲಾಗಿದೆ. ಲಾರಿ ಚಾಲಕರಾದ ಚಂದ್ರಶೇಖರ ಕುದ್ಮಾನ್ ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ.