ಪತಿ ನಿಧನದಿಂದ ಪತ್ನಿಗೆ ವಿಮೆಯ ಲಕ್ಷಾಂತರ ಹಣ | ಹಣಕ್ಕಾಗಿ ಸಂಬಂಧಿಕರಿಂದಲೇ ಮಹಿಳೆಯ ಕೊಲೆ

ಮೈಸೂರು : ಪತಿ ತೀರಿಹೋದ ಬಳಿಕ ಆಕೆಗೆ ಪತಿಯ ವಿಮೆಯಿಂದ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಮಾರಕಾಸ್ತ್ರಗಳಿಂದ ಮಹಿಳೆಯನ್ನು ಭೀಕರವಾಗಿ ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಚೌಥಿ ಗ್ರಾಮದಲ್ಲಿ ನಡೆದಿದೆ.

 ಚೌಥಿ ಗ್ರಾಮದ ಬಸವರಾಜು ಹಾಗೂ ಯಶೋಧಮ್ಮ ದಂಪತಿ ಪುತ್ರಿಯಾದ ಭಾಗ್ಯವತಿ(32) ಮೃತ ಮಹಿಳೆ.  ಇವರಿಗೆ ಸಂಪತ್ ಕುಮಾ‌ರ್ ಎಂಬುವವರ ಜೊತೆ ಮದುವೆ ಮಾಡಲಾಗಿತ್ತು. ಇಬ್ಬರು ಗಂಡು ಮಕ್ಕಳು ಕೂಡ ಇದ್ದರು. ಆದರೆ 5 ವರ್ಷದ ಹಿಂದೆ ಪತಿ ಸಂಪತ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಪತಿಯನ್ನು ಕಳೆದುಕೊಂಡ ಆಕೆ ಧೈರ್ಯ ಕಳೆದುಕೊಳ್ಳದೆ ಇದ್ದ ಎರಡೂವರೆ ಕೃಷಿ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ತನ್ನ ಕಾಲುಗಳ ಮೇಲೆ ನಿಂತುಕೊಂಡಿದ್ದಳು.ಜೊತೆಗೆ ಲಕ್ಷಾಂತರ ರೂ. ಹಣ ಸಂಪಾದಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಪತಿಯ ವಿಮೆ ಹಣ ಸುಮಾರು 12 ಲಕ್ಷ ರೂಪಾಯಿ ಬರುವುದಿತ್ತು. ಇದು ಸಹಜವಾಗಿ ಆಕೆಯ ಸಂಬಂಧಿಕರ ಕಣ್ಣು ಕುಕ್ಕಿದೆ.



































 
 

ಮಹಿಳೆಯ ಏಳಿಗೆಯನ್ನು ಸಹಿಸದೆ ಆಕೆಯ ಸಂಬಂಧಿಕರಾದ ಮುತ್ತುರಾಜ್ ಹಾಗೂ ಇತರರು ಸೇರಿಕೊಂಡು ಭಾಗ್ಯವತಿಯನ್ನು ಬರ್ಬರವಾಗಿ ಕತ್ತರಿಸಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುತ್ತುರಾಜ್ ಹಾಗೂ ಇತರ ಸಂಬಂಧಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top