ರಾಮನಗರ : ಮಾಗಡಿ ಪಟ್ಟಣದ ಜ್ಯೋತಿ ನಗರದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶೋಭ (38) ದಿಲೀಪ್ (16) ಮೃತರ. ಮನೆಯಲ್ಲಿ ಸ್ನಾನ ಮಾಡಲು ಅಂತ ದಿಲೀಪ್ ಹೋಗಿದ್ದ ವೇಳೆ ಗೀಸರ್ ಅನಿಲ ಸೋರಿಕೆಯಾಗಿದೆ.
ಸೋರಿಕೆಯಾದ ಅನಿಲ ಸೇವಿಸಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ನಾನ ಮಾಡಲು ಹೋದ ದಿಲೀಪ್ ಸಾಕಷ್ಟು ಸಮಯ ಕಳೆದರೂ ಹೊರ ವಾರದ ಹಿನ್ನಲೆಯಲ್ಲಿ ತಾಯಿ ಕೂಡ ಒಳಗಡೆ ಹೋಗಿದ್ದಾಳೆ. ಇದೇ ವೇಳೆ ಗೀಸರ್ ಗಾಳಿ ಸೇವಿಸಿ ತಾಯಿ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ಧಾರೆ.
ಘಟನಾ ಸ್ಥಳಕ್ಕೆ ಮಾಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.