ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಕ್ರೈಂ ತಡೆಗಟ್ಟಲು ಸಹಾಯವಾಣಿ ಆರಂಭ

ಬೆಂಗಳೂರು : ಕೆಲವು  ದಿನಗಳಿಂದ  ಕರ್ನಾಟಕದಲ್ಲಿ ಸೈಬ‌ರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಬ‌ರ್ ವಂಚಕರ ಬಲೆಗೆ ಬಿದ್ದು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಇದೀಗ ಸೈಬರ್ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆ 1930 ಎಂಬ ಸಹಾಯವಾಣಿ ಆರಂಭಿಸಿದೆ.

ಈ ಬಗ್ಗೆ ಟ್ವಿಟ್ ಮಾಡಿದ ರಾಜ್ಯ ಪೊಲೀಸ್ ಇಲಾಖೆ, ಆತ್ಮೀಯ ಆನ್‌ಲೈನ್ ಬಳಕೆದಾರರೇ ಸೈಬರ್ ವಂಚನೆಯಿಂದ ದೂರ ಇರಲು ನಿಮ್ಮ ನಡೆಯ ಯಾವುದೇ ಸುಳಿವು ವಂಚಕರಿಗೆ ನೀಡಬೇಡಿ. ಒಂದು ವೇಳೆ ನೀವು ಸೈಬರ್ ಬಲೆಯಲ್ಲಿ ಸಿಲುಕಿದ್ದರೆ ಹತ್ತರಿದ ಪೊಲೀಸ್‌ ಠಾಣೆಗೆ ದೂರು ನೀಡಿ ಅಥವಾ ಸೈಬ‌ರ್ ಕ್ರೈಂ ಸಹಾಯವಾಣಿ 1930 ಗೆ ಕರೆ ಮಾಡಿ ಎಂದಿದೆ.

ಕಳೆದ ಮೂರು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಡಿಜಿಟಲ್ ಹಣಕಾಸು ವಂಚನೆಗಳು ನಡೆದಿವೆ ಎಂದು ಭಾರತೀಯ ಸೈಬ‌ರ್ ಅಪರಾಧ ಸಮನ್ವಯ ಕೇಂದ್ರ ವರದಿ ಮಾಡಿದೆ. 2023 ರಲ್ಲಿ 13,000 ಕ್ಕೂ ಹೆಚ್ಚು ಸೈಬರ್ ಹಣಕಾಸಿನ ವಂಚನೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅರ್ಧದಷ್ಟು ಡಿಜಿಟಲ್ ಪಾವತಿ ವಂಚನೆ ಆಗಿದೆ. ಡಿಜಿಟಲ್ ಹಣಕಾಸು ವಂಚನೆಯ ಸಂತ್ರಸ್ತರು ಕನಿಷ್ಠ 10,319 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top