ಶೃಂಗೇರಿ: ಶ್ರೀ ಕ್ಷೇತ್ರ ಶೃಂಗೇರಿಯ ಶಾರದಾಂಬೆಯ ದರ್ಶನಕ್ಕೆ ಬರುವ ಭಕ್ತಾದಿಗಳು ಆ.15 ರಿಂದ ಭಾರತೀಯ ಸಾಂಪ್ರದಾಯಿಕ ಉಡುಗೆಯನ್ನು ಕಡ್ಡಾಯವಾಗಿ ತೊಡಬೇಕೆಂದು ಆದೇಶಿಸಿದೆ.
ಈ ಕುರಿತು ಶೃಂಗೇರಿ ಶಾರದಾಂಬೆ ಆಡಳಿತ ಮಂಡಳಿ ನಿರ್ಧರಿಸಿದೆ. ಸಾಂಪ್ರದಾಯಿಕವಲ್ಲದ ಉಡುಗೆ ತೊಟ್ಟು ಬಂದವರಿಗೆ ಅರ್ಧಮಂಟಪದ ಒಳಗೆ ಪ್ರವೇಶವಿರುವುದಿಲ್ಲ, ಬದಲಾಗಿ ಹೊರಗಿನಿಂದಲೇ ದೇವರ ದರ್ಶನ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.
ಸಾಂಪ್ರದಾಯಿ ಉಡುಗೆ ಹೀಗಿದೆ
ಪುರುಷರು ಧೋತಿ ಅಥವಾ ಶಲ್ಯ ಮತ್ತು ಉತ್ತರೀಯ ಹಾಗೂ ಮಹಿಳೆಯರು ಸೀರೆ, ರವಿಕೆ, ಸಲ್ವಾರ್ ಜೊತೆಗೆ ದುಪ್ಪಟ ಅಥವಾ ಲಂಗ ಧಾವಣೆ ಧರಿಸಬಹುದು.