ಪುತ್ತೂರು: ಕೌಡಿಚ್ಚರ್ ನಲ್ಲಿ ಮೂರು ದಿನಗಳ ಹಿಂದೆ ಎರಡು ಮನೆಗಳ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದ್ದು, ಸ್ಥಳಕ್ಕೆ ಎನ್ ಎಸ್ ಯು ಐ ಪುತ್ತೂರಿನ ಪ್ರಮುಖರು ಭೇಟಿ ನೀಡಿದ್ದರು. ಬಳಿಕ ತಹಶೀಲ್ದಾರ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು.

ಮನೆಯವರ ಕಷ್ಟವನ್ನು ಅರಿತ ಎನ್ ಎಸ್ ಯುಐ ಪ್ರಮುಖ ಪ್ರಜ್ವಲ್ ಕೌಡಿಚ್ಚಾರ್ ಸಹಿತ ಕಾರ್ಯಕರ್ತರು ಹಾನಿಗೊಳಗಾಗಿದ್ದ ಮನೆ ಸರಿಪಡಿಸಲು ಅಗತ್ಯವಿದ್ದ ಶೀಟ್, ಕಂಬ, ಸಿಮೆಂಟ್ ಮೊದಲಾದವುಗಳನ್ನು ನೀಡಿದರು.
ರಾಜ್ಯ ಎನ್ ಎಸ್ ಯುಐ ಕಾರ್ಯದರ್ಶಿ ಭಾತೀಷ್ ಅಳಕೆಮಜಲು, ಪುತ್ತೂರು ಅಧ್ಯಕ್ಷ ಎಡ್ವರ್ಡ್, ಪ್ರಮುಖ ಜವಾದ್ ಸೇರಿದಂತೆ ಹಲವರು ಜೊತೆಗಿದ್ದರು.