ಹಳಿತಪ್ಪಿದ ರೈಲು | ನಾಲ್ವರು ಸಾವು, 25 ಮಂದಿಗೆ ಗಾಯ

ಉತ್ತರ ಪ್ರದೇಶ: ದಿಬ್ರುಗಢ ಎಕ್ಸ್‌ಪ್ರೆಸ್‌ನ  15 ಬೋಗಿಗಳು ಹಳಿ ತಪ್ಪಿ ನಾಲ್ವರು ಮೃತಪಟ್ಟು, 25 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಹಳಿ ತಪ್ಪಿದ ರೈಲು ಚಂಡೀಗಢದಿಂದ ಬರುತ್ತಿತ್ತು. ಯುಪಿಯ ಜಿಲಾಹಿ ರೈಲು ನಿಲ್ದಾಣ ಮತ್ತು ಗೋಸಾಯಿ ದಿಹ್ವಾ ನಡುವೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಉತ್ತರ ಪ್ರದೇಶ ಮತ್ತು ಅಸ್ಸಾಂ ಸರ್ಕಾರಗಳು ಕಾರ್ಯಾಚರಣೆಯನ್ನು ಗಮನಿಸುತ್ತಿವೆ.







https://screenapp.io/app/#/shared/8P4BcrrHNx























 
 

ಕಳೆದ ತಿಂಗಳು ಜೂನ್ 17ರಂದೇ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಸೀಲ್ದಾಹ್ನಗೆ ಹೊರಟಿದ್ದ ಪ್ರಯಾಣಿಕ ರೈಲು ಕಾಂಚನಜುಂಗಾ ಎಕ್ಸ್‌ ಪ್ರೆಸ್‌ಗೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 10 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು.

ಈ ಘಟನೆ ನಡೆದು ಸರಿಯಾಗಿ ಒಂದು ತಿಂಗಳು ಕಳೆದಿದೆ ಅಷ್ಟೇ ಅಷ್ಟರಲ್ಲಿ ಈಗ ಉತ್ತರ ಪ್ರದೇಶ ಗೊಂಡಾದಲ್ಲಿ ಮತ್ತೊಂದು ರೈಲು ದುರಂತ ನಡೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top