ಕೂರ್ನಡ್ಕ ವೃತ್ತದ ಬಳಿ ಅಪಾಯದ ಸ್ಥಿತಿಯಲ್ಲಿರುವ ಮರ | ತೆರವಿಗೆ ಆಗ್ರಹ

ಪುತ್ತೂರು : ಕೂರ್ನಡ್ಕ ಜಂಕ್ಷನ್ ಬಳಿ ಅಪಾಯಕಾರಿ ಮರವೊಂದು  ಬೀಳುವ ಅಪಾಯದ ಸ್ಥಿತಿಯಲ್ಲಿದೆ.  ಇದನ್ನು ತೆರವುಗೊಳಿಸದೇ ಹೋದರೆ ದೊಡ್ಡ ಅನಾಹುತ ಸಂಭವಿಸಬಹುದು ಎಂಬ ಆತಂಕದಲ್ಲಿದ್ದಾರೆ.

ಸ್ಥಳೀಯರು ಪುತ್ತೂರು ನಗರದಿಂದ ಒಂದು ಕಿಲೋಮೀಟರ್ ದೂರದಲ್ಲಿ ಇರುವ ಈ ಪ್ರದೇಶ  ಆಗಿದ್ದು, ಇದೇ ಮಾರ್ಗದಲ್ಲಿ ದಿನನಿತ್ಯ  ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಂಚಾರಿಸುತ್ತಾರೆ.  

ಈ ಮಾರ್ಗದಲ್ಲಿ ನಿರಂತರವಾಗಿ ವಾಹನ ಸಂಚಾರವೂ ಇರುವುದರಿಂದ ವಾಹನಗಳ ಮೇಲೆಯೂ ಕೂಡ ಬೀಳುವ ಅಪಾಯ ಇದೆ ಅದಲ್ಲದೇ ಅದರ ಹತ್ತಿರವೇ ವಿದ್ಯುತ್ ತಂತಿಗಳೂ ಹಾದು ಹೋಗಿದ್ದು ಮರ ಮುರಿದು ಬಿದ್ದಲ್ಲಿ ಇನ್ನಷ್ಟು ಅನಾಹುತ ಆಗುವ ಸಂಭವ ಇದೆ ಆದ್ದರಿಂದ ತಕ್ಷಣ ಈ ಮರವನ್ನು ತೆರವುಗೊಳಿಸಿ ಮುಂದಿನ ದಿನಗಳಲ್ಲಿ ಸಂಭವಿಸುವ ದೊಡ್ಡ ದುರಂತವನ್ನು ಶಾಸಕರು ಹಾಗೂ ನಗರಸಭಾ ಅಧಿಕಾರಿಗಳು ತಪ್ಪಿಸಬೇಕಾಗಿದೆ. ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top