ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿ ಕಾರ್ಯಾಗಾರ

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು. ಸ್ಪಷ್ಟವಾದ ಗುರಿ ರೂಪಿಸಿಕೊಂಡು ಕಲಿಕೆಯು ಮುಗಿದ ನಂತರ ನಾವು ಯಾವ ಹಾದಿಯಲ್ಲಿ ಮುಂದುವರೆಯಬೇಕು ಎಂದು  ನಿರ್ಧರಿಸಿಕೊಂಡಿರಬೇಕು.  ಯಾವ ಪದವಿ ಪಡೆದುಕೊಳ್ಳುತ್ತೇವೆ ಎಂಬುವುದಕ್ಕಿಂತ ಅದು ನಮ್ಮ ಮೇಲೆ ಯಾವ ರೀತಿಯಾದ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುವುದು ಮುಖ್ಯ.  ನಮ್ಮ ಪ್ರತಿಭೆ, ಸಾಮರ್ಥ್ಯವನ್ನು ಗುರುತಿಸಿಕೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.

ಅವರು  ವಿವೇಕಾನಂದ  ಕಲಾ, ವಿಜ್ಞಾನ  ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಕಾಲೇಜಿನಲ್ಲಿ ಆಯೋಜಿಸಿದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಸುಳ್ಯ  ರೋಟರಿ ಶಿಕ್ಷಣ ಸಂಸ್ಥೆಯ ಖಜಾಂಜಿ ಗಿರಿಜ ಶಂಕರ ಮಾತನಾಡಿ, ಶಿಕ್ಷಣ ಎಂಬುದು ಅರಿವನ್ನು ಮೂಡಿಸುವಂತದ್ದು. ವ್ಯಕ್ತಿಯ ಗುಣವನ್ನು ನಿರ್ಧರಿಸುವುದು ಅವನ ಆಂತರಿಕ ಶಕ್ತಿ. ವಿದ್ಯಾರ್ಥಿ ಜೀವನದಲ್ಲಿ ಸಂಕಲ್ಪ ಮತ್ತು ಆತ್ಮವಿಶ್ವಾಸ ಮುಖ್ಯವಾಗಿರುತ್ತದೆ.  ವಿದ್ಯಾರ್ಥಿಗಳು ಜೀವನವನ್ನು ನಿರ್ಲಕ್ಷ್ಯ ಮಾಡಬಾರದು.ವಿದ್ಯಾರ್ಥಿ ಜೀವನ ಎಂಬುದು ಒಮ್ಮೆ ಮಾತ್ರ ಸಿಗುವಂತದ್ದು. ಗುರುಗಳನ್ನು ಗೌರವಿಸಬೇಕು, ಅವರು ಏನೇ ಹೇಳಿದರು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು.ವಿದ್ಯಾರ್ಥಿಗಳು ತಾಳ್ಮೆ, ಪಾರದರ್ಶಕತೆ, ಆತ್ಮವಿಶ್ವಾಸ, ಸಂಕಲ್ಪ ಮತ್ತು ಸನ್ಮುಖಿಯಾಗಿರುವುದು ಮುಖ್ಯ ಎಂದು ಹೇಳಿದರು.



































 
 

ವೇದಿಕೆಯಲ್ಲಿ  ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್., ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಉಪಸ್ಥಿತರಿದ್ದರು.

ಕಲಾ ವಿಭಾಗದ ಡೀನ್ ಡಾ.ದುರ್ಗಾರತ್ನ ಸ್ವಾಗತಿಸಿ, ವಾಣಿಜ್ಯ ವಿಭಾಗದ ಡೀನ್ ಡಾ. ರವಿಕಲಾ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಮನಮೋಹನ ಎಂ, ಇತಿಹಾಸ ವಿಭಾಗದ ಉಪನ್ಯಾಸಕ  ಡಾ. ಪ್ರಮೋದ್ ಎಂ. ಜಿ ಹಾಗೂ ಐಕ್ಯೂಎಸಿ ಘಟಕದ ಸಂಯೋಜಕ  ಶಿವಪ್ರಸಾದ್ ಕೆ.ಎಸ್ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top