ಮಹಾರಾಷ್ಟ್ರ: ಯುವಕನೊಬ್ಬ ನದಿಯಲ್ಲಿ ಈಜಲು ಹೋಗಿ ಸ್ನೇಹಿತನ ಎದುರೇ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ.
ನೀರುಪಾಲಾದ ಯುವಕನನ್ನು ಜಯೇಶ್ ರಾಮಚಂದ್ರ ಅಂಬೆ (32) ಎಂದು ಗುರುತಿಸಲಾಗಿದೆ.
ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ಮಾಡಿ ನದಿಯಲ್ಲಿ ಈಜಲು ಇಳಿದಿದ್ದ ಯುವಕ ದುರಂತಕ್ಕೀಡಾಗಿದ್ದಾನೆ. ಸ್ನೇಹಿತರೊಂದಿಗೆ ನದಿ ಬಳಿ ಬಂದಿದ್ದ ಯುವಕ ಈಜಲೆಂದು ನದಿಗೆ ಇಳಿದಿದ್ದಾನೆ. ನದಿಯಲ್ಲಿ ಏಕಾಏಕಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ನೋಡ ನೋಡುತ್ತಿದ್ದಂತೆ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಆತನನ್ನು ರಕ್ಷಿಸಲು ಯುವಕರು ಪ್ರಯತ್ನಿಸಿದ್ದರಾದರೂ ಸಾಧ್ಯವಾಗಿಲ್ಲ. ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು, ಯುವಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.