ಹಗರಣಗಳ ಸರಣಿ ಧಾರಾವಾಹಿಯೇ ರಾಜ್ಯ ಕಾಂಗ್ರೆಸ್ ಸರ್ಕಾರ | ವ್ಯಂಗ್ಯವಾಡಿದ ಬಿಜೆಪಿ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್​​​ನಲ್ಲಿ ನಡೆದಿದೆ ಎನ್ನಲಾದ 2,000 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ಬಿಜೆಪಿಯು ರಾಜ್ಯ ಕಾಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಈ ಬಗ್ಗೆ ಟ್ವೀಟ್ ಮಾಡಿ, ಹಗರಣಗಳ ಸರಣಿ ಧಾರಾವಾಹಿಯೇ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ವ್ಯಂಗ್ಯವಾಡಿದೆ.

ವಾಲ್ಮೀಕಿ ನಿಗಮದಲ್ಲಿ ಹಗರಣವಾಯ್ತು, ಮುಡಾದಲ್ಲಿ ಹಗರಣವಾಯ್ತು, ಈಗ ಅಪೆಕ್ಸ್‌ ಬ್ಯಾಂಕ್‌ ನ ಸರದಿ. ಸಹಕಾರಿ ಸಚಿವ ಕೆ.ಎನ್​​.ರಾಜಣ್ಣ ಅವರು ಅಪೆಕ್ಸ್‌ ಬ್ಯಾಂಕ್‌ ನಲ್ಲಿ 2000 ಕೋಟಿಗೂ ಹೆಚ್ಚು ಹಗರಣ ನಡೆಸಿದ್ದು, ಹೈಕೋರ್ಟ್‌ ಈ ಸಂಬಂಧ ತನಿಖೆಗೆ ಆದೇಶಿಸಿದೆ. ಸಿಎಂ ಸಿದ್ದರಾಮಯ್ಯ ಅವರಾದಿಯಾಗಿ ಕಾಂಗ್ರೆಸ್​​ನ ಬಹುಪಾಲು ಸಚಿವರು ಹಾಗೂ ಶಾಸಕರು ಪರಪ್ಪನ ಅಗ್ರಹಾರಕ್ಕೆ ತಾ ಮುಂದು ನಾ ಮುಂದು ಎಂಬ ರೇಸ್‌ ನಲ್ಲಿರುವುದು ಕರ್ನಾಟಕದ ದುರಂತ ಎಂದು ಬಿಜೆಪಿ ಕುಕ್ಕಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top