ಮಂಗಳೂರು: ಮೌಲ್ವಿಯೊಬ್ಬ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಅಪ್ರಾಪ್ತಗೆ ಕಿರುಕುಳ ನೀಡಿದ ಸಂದರ್ಭ ಬಾಲಕಿಯ ತಾಯಿ ಹಾಗೂ ಇತರ ಮಹಿಳಾ ಪ್ರಯಾಣಿಕರೇ ಸೇರಿ ಯದ್ವಾತದ್ವಾ ಗೂಸಾ ನೀಡಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಆರೋಪಿ ಪ್ರಯಾಣಿಸುತ್ತಿದ್ದ. ಈತನ ಪಕ್ಕದ ಸೀಟ್ನಲ್ಲಿ ಅಪ್ರಾಪ್ತಯೊಬ್ಬಳು ಕುಳಿತಿದ್ದಳು. ಬಸ್ ಸಕಲೇಶಪುರ ತಳುಪುತ್ತಿದ್ದ ವೇಳೆ ಬಾಲಕಿಯನ್ನು ಆರೋಪಿ ಮೆತ್ತಗೆ ಸ್ಪರ್ಶಿಸುತ್ತಿರುವುದನ್ನು ಗಮನಿಸಿ ಮತ್ತೊಂದು ಸೀಟ್ನಲ್ಲಿದ್ದ ಪ್ರಯಾಣಿಕ ವೀಡಿಯೋ ಮಾಡಿದ್ದಾನೆ. ಬಳಿಕ ಈ ವಿಚಾರವನ್ನು ಆತ ಬಾಲಕಿಯ ತಾಯಿಗೆ ತಿಳಿಸಿದ್ದಾನೆ. ವಿಚಾರ ತಿಳಿದು ರೊಚ್ಚಿಗೆದ್ದ ತಾಯಿ ಹಾಗೂ ಮುಂದಿನ ಸೀಟ್ನಲ್ಲಿದ್ದ ಮಹಿಳಾ ಪ್ರಯಾಣಿಕರು ಆರೋಪಿಗೆ ಯದ್ವಾತದ್ವಾ ಗೂಸಾ ನೀಡಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.