ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿಯೊಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ.
ಪುತ್ತೂರಿನಲ್ಲಿ ವಾಸವಾಗಿರುವ ಯತೀಶ್ (52) ಎಂಬವರು ಡೆಂಗ್ಯೂ ಜ್ವರಕ್ಕೆ ಬಲಿಯಾದವರು.
ಜ್ವರದಿಂದ ಬಳಲುತ್ತಿದ್ದ ಯತೀಶ್ ಅವರು ಜುಲೈ 10 ರಂದು ಬುಧವಾರ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅದಾಗಲೇ ತೀವ್ರ ಜ್ವರಕ್ಕೆ ಈಡಾಗಿರುವ ಈತನನ್ನು ಐಸಿಯು ನಲ್ಲಿ ಚಿಕಿತ್ಸೆ ಗಾಗಿ ದಾಖಲಿಸಲಾಗಿತ್ತು ಎಂದು ಇಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಅದಾಗಲೇ ಪರಿಸ್ಥಿತಿ ಕೈ ಮೀರಿಹೋಗಿದ್ದು ಅವರು ಚಿಕಿತ್ಸೆಗೆ ಸ್ಪಂದಿಸದಿರುವ ಹಿನ್ನಲೆಯಲ್ಲಿ ಅವರನ್ನು ಸಂಜೆ ವೇಳೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಸಲಾಗಿತ್ತು. ಆದರೆ ಈದಿನ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.