ಕಾಂಗ್ರೆಸ್ ಹಿರಿಯ ನಾಯಕ, ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ದಿಢೀರ್ ರಾಜೀನಾಮೆ |  ಪತ್ರಿಕಾಗೋಷ್ಠಿಯಲ್ಲಿ ಏನಂದ್ರು ಗೊತ್ತಾ ?

ಪುತ್ತೂರು: ಪುಡಾ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಕೆ.ಭಾಸ್ಕರ ಕೋಡಿಂಬಾಳ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಶಾಸಕ ಅಶೋಕ್ ರೈ ಮಾತಿನಿಂದ ನೊಂದು ಈ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಪುತ್ತೂರು ಕಾಂಗ್ರೆಸ್ಸಿನ ಹಿರಿಯ ನಾಯಕನ ಈ ರಾಜೀನಾಮೆ ನಿರ್ಧಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಜೂ 11 ರಂದು ಬೆಂಗಳೂರಿನಿಂದ ಕರೆ ಮಾಡಿದ ಶಾಸಕರು, ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರ ಸತ್ತಿದೆ. ನಿಮ್ಮ ಕಾರ್ಯವೈಖರಿ ಬಗ್ಗೆ ಜನ ಮಾತನಾಡಲು ಶುರು ಮಾಡುತ್ತಾರೆ” ಎಂದಿದ್ದರು ಎಂದು ತಿಳಿಸಿದರು.



































 
 

ನಾನು ಪುಡಾ ಅಧ್ಯಕ್ಷನಾಗಿ ಪದಗ್ರಹಣ ಆರಂಭಿಸಿದ ದಿನವೇ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆಯಿತು. ಅದು ಜೂ 5 ರವರೆಗೆ ಇತ್ತು. ಬಳಿಕ ಸಿಕ್ಕಿದ 22 ದಿನದಲ್ಲಿ ಕಟ್ ಕನ್ವರ್ಶನ್ ಹಾಗೂ ಶ್ರೀ ಮಹಾಲೀಂಗೇಶ್ವರ ದೇಗುಲದ ಬಿಲ್ ಮಂಜೂರು ಮಾಡುವ ಕಾರ್ಯವನ್ನು ಮಾಡಿದ್ದೇನೆ.

ನನ್ನನ್ನು ಯಾವುದೇ ಶಿಫಾರಸ್ಸು ಇಲ್ಲದೆ ಶಾಸಕರು ಆಯ್ಕೆ ಮಾಡಿದ್ದು ಅವರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದಿದ್ದಾಗ ರಾಜೀನಾಮೆ ಸೂಕ್ತ ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top